ಬೆಂಗಳೂರು: ಕರುನಾಡ ಕುಳ್ಳ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಇಂದು ಬೆಳಿಗ್ಗೆ ಹೃದಯಾಘಾತವಾಗಿದೆ. ಎಲೆಕ್ಟ್ರಾನಿಕ್ ಸಿಟಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದು, ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ದ್ವಾರಕೀಶ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಚಿತ್ರರಂಗದಲ್ಲಿ ಏಳು ಬೀಳುಗಳನ್ನು ಕಂಡಿದ್ದರು. ಇನ್ನು ಸಾಹಸಿಂಹ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿದೆ.

ಈ ಜೋಡಿ ಹಲವಾರು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದರು. ಇನ್ನೂ ದ್ವಾರಕೀಶ್ ಅವರು ತಮ್ಮ ಮೊದಲ ಪತ್ನಿ ಅಂಬುಜ ಅವರು ತೀರಿಕೊಂಡ ದಿನವೇ ಕೊನೆಯುಸಿರೆಳೆದಿದ್ದಾರೆ. ಅಮ್ಮ ಅಂಬುಜ ಅವರು ಏಪ್ರಿಲ್ 16, 2021 ರಂದು ಮುಂಜಾನೆ 9.45 ಕ್ಕೆ ಸಾವನ್ನಪ್ಪಿದ್ದರು. ತಂದೆ ಏಪ್ರಿಲ್ 16 2024 ಇಂದು ಮುಂಜಾನೆ 9.45 ಕ್ಕೆ ಇಹ ಲೋಕ ತ್ಯಜಿಸಿದ್ದಾರೆ ಎಂದು ದ್ವಾರಕೀಶ್ ಪುತ್ರ ಯೋಗಿ ಹೇಳಿದ್ದಾರೆ.