ದೆಹಲಿ: ಅಂತಾರಾಷ್ಟ್ರೀಯವಾಗಿ ಕಚ್ಚಾವಸ್ತುಗಳ ಬೆಲೆ
ಕಡಿಮೆಯಾಗಿರುವುದರಿಂದ ಎಲೆಕ್ನಿಕ್ ವಾಹನ ಗಳ (ಇ.ವಿ.) ಬ್ಯಾಟರಿ ಬೆಲೆ ಇಳಿಕೆ ಕಂಡಿದೆ. ಇದರಿಂದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಉತ್ಪಾದಕ ಕಂಪನಿಗಳಿಗೆ ಮತ್ತಷ್ಟು ಅನುಕೂಲ ಸಿಕ್ಕಿದಂತಾಗಿದೆ. ಪರಿಣಾಮ, ಇ.ವಿ.ಗಳ ಬೆಲೆ ಇಳಿಕೆ ಆಗಲಿದೆ. ಕಾರು ಬ್ಯಾಟರಿಯ ಬೆಲೆ ಪ್ರತಿ ಕಿಲೋ ವ್ಯಾಟ್‌ಗೆ 11,500 ರೂ. ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆಯಲ್ಲಿ ಶೇ.14ರಷ್ಟು ಕುಸಿತ ಕಂಡಿದ್ದು, ಕಳೆದ ವರ್ಷ ಪ್ರತಿ ಕಿಲೋವ್ಯಾಟ್‌ನ ಬೆಲೆ 13,480 ರೂ. ಇತ್ತು. 2018 ರಿಂದ ಇದು ಅತಿದೊಡ್ಡ ಇಳಿಕೆಯಾಗಿದೆ. ಪ್ರತಿಬಾರಿ ಬ್ಯಾಟರಿ ಉತ್ಪಾದನಾ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದಂತೆ ಬೆಲೆ ಇಳಿಕೆಯಾಗುತ್ತಿತ್ತು.

ಆದರೆ, ಈ ಬಾರಿ ಕಚ್ಚಾವಸ್ತುಗಳ ಬೆಲೆ ಇಳಿಕೆಯಿಂದ ಬ್ಯಾಟರಿ ಬೆಲೆ ಕಡಿಮೆಯಾಗಿದೆ. ಕಳೆದ ಜನವರಿಯಿಂದ ಲೀಥಿಯಂ ಬೆಲೆಯಲ್ಲಿ ಸತತವಾಗಿ ಕುಸಿತ ಕಂಡಿದೆ. ಇದು ಮಾಲಿನ್ಯ ರಹಿತವಾದ ಇ.ವಿ.ಗಳ ಉತ್ತೇಜನಕ್ಕೆ ಸಹಕಾರಿಯಾಗಲಿದೆ.