ಬೆಳಗಾವಿ :
ಕೆಎಲ್ ಇ ಸಂಸ್ಥೆಯ ಜಿ.ಎ. ಪದವಿ ಪೂರ್ವ ಮಹಾವಿದ್ಯಾಲಯದ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ-2023/24 ರ ಸಮಾರೋಪ ಸಮಾರಂಭವು ದಿನಾಂಕ 05-12-2023 ರಂದು ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ದೀಪಾ ರಾಮಜಿ ಪಮ್ಮಾರ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಪ್ರಾ.ಆರ್. ಎಸ್. ಪಾಟೀಲ ವಹಿಸಿದ್ದರು. ರಾಷ್ಟ್ತ್ರೀಯ ಸೇವಾ ಯೋಜನೆ ಸೇವಾ ಮನೋಭಾವನೆಯನ್ನು ಬೆಳೆಸುವುದರ ಮೂಲಕ ಸಾಮಾಜಿಕ ಸಂಬಂಧ ಬೆಸೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಗ್ರಾಮೀಣ ಜೀವನವು ಸ್ವಾವಲಂಬನೆಯ ಮಂತ್ರ ತಿಳಿಸುತ್ತದೆ ಎಂದರು.

ಕಾರ್ಯಕ್ರಮ ಅಧಿಕಾರಿ ಟಿ.ಪಿ. ಬಾನಕರೆ, ಸಹಾಯಕ ಕಾರ್ಯಕ್ರಮ ಅಧಿಕಾರಿ ಡಿ.ಎಸ್. ಪವಾರ, ಶಿಲ್ಪಾ ದೇವಲಾಪುರ, ಎಲ್ಲ ಉಪನ್ಯಾಸಕ ಸಿಬ್ಬಂದಿ ಭಾಗವಹಿಸಿದ್ದರು.
ಏಳು ದಿನಗಳ ಕಾಲ ವಿವಿಧ ಉಪನ್ಯಾಸ, ಆರೋಗ್ಯ ತಪಾಸಣೆ ಹಾಗೂ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.