ಬೆಂಗಳೂರು : ರಾಜ್ಯದಲ್ಲಿ ಇದೀಗ ಸಾಂಕ್ರಾಮಿಕ ರೋಗಗಳ ಹಾವಳಿ ಮಿತಿಮೀರುತ್ತಿದೆ. ಹವಾಮಾನ ಬದಲಾವಣೆಯ ಜೊತೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಮಳೆಯ ಹೆಚ್ಚಳದಿಂದ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಸೃಷ್ಟಿಯಾಗುತ್ತಿವೆ. ರವಿವಾರ ಒಂದೇ ದಿನ 159 ಜನರಲ್ಲಿ ಡೆಂಗ್ಯೂ ದೃಢಪಟ್ಟಿದೆ. ಝೀಕಾ ವೈರಾಣು ಸೋಂಕು ಕಂಡುಬಂದಿದೆ. ಎಲ್ಲೆಡೆ ಜನರಿಗೆ ಡೆಂಗ್ಯೂ ಜ್ವರ ಹಾಗೂ ಇದರ ಜ್ವರಗಳ ಭೀತಿ ತಲೆದೋರಿದೆ.