ಬೆಳಗಾವಿ :
ಬೆಳಗಾವಿ ಉತ್ತರ ಮತಕ್ಷೇತ್ರದ ಶ್ರೀನಗರ ವೀರ ರಾಣಿ ಕಿತ್ತೂರು ಚೆನ್ನಮ್ಮ ಹೌಸಿಂಗ್ ಸೊಸಾಯಟಿ ಶಿವಾಲಯ ದೇವಸ್ಥಾನದ ಹತ್ತಿರ ಸನ್ 2020-21ನೇ ಸಾಲಿನ ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಡಿ ನಿರ್ಮಾಣಗೊಂಡ ಕಂಪೌಂಡ್ ವಾಲ್ ಕಾಮಗಾರಿಯನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸಿದರು.

ಶಿವಾಂಜನೇಯ ಸೇವಾ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹಾದೇವ ರಾಠೋಡ, ನಗರ ಸೇವಕಿ ಲಕ್ಷ್ಮೀ ಮಹಾದೇವ ರಾಠೋಡ, ಎಚ್.ಎಸ್. ಯಳ್ಳೂರ, ಅನಿಲ್ ಕಳ್ಳಿಗುದ್ದಿ, ವಿನಯ ದೇಶನೂರ, ಅರುಣ್ ಮರಾಠೆ ಸೇರಿದಂತೆ ಸಂಘದ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.