ಮೂಡಲಗಿ : ಮುಂದೆ ಬರುವಂತಹ ಪೀಳಿಗೆಗೆ ಅತ್ಯಂತ ನೆಮ್ಮದಿಯ ಬದುಕನ್ನು ಸಾಗಿಸಬೇಕಾದರೆ ಒಂದಿಷ್ಟು ಆಧ್ಯಾತ್ಮಿಕ ಮನೋಭಾವನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕತೆ ಇದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಶನಿವಾರ ತಾಲೂಕಿನ ವಡೇರಹಟ್ಟಿ ಗ್ರಾಮದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಆಶ್ರಮದಲ್ಲಿ ಆಯೋಜಿಸಿದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ, ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಹಾಗೂ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಗುರು ನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ನಡೆದಾಡುವ ದೇವರೆಂದೇ ಪ್ರಸಿದ್ಧರಾದ ವಿಜಯಪುರ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳು ತಮ್ಮ ಜೀವನದುದ್ದಕ್ಕೂ ಸಮಾಜದ ಏಳಿಗೆಗಾಗಿ ಶ್ರಮಿಸಿ, ಸಮಾಜಕ್ಕೆ ಮಾದರಿಯಾಗಿ ಲಕ್ಷಾಂತರ ಜನರಿಗೆ ದಾರಿದೀಪವಾದ ದಿವ್ಯ ಚೇತನರಾಗಿದ್ದಾರೆ. ಜ್ಞಾನ ದಾಸೋಹದ ಮೂಲಕ ನಮ್ಮೆಲ್ಲರ ಬದುಕನ್ನು ಪರಿವರ್ತನೆ ಮಾಡಿ ಅವರ ಬೆಳಕನ್ನು ಚೆಲ್ಲಿದ್ದು, ಪ್ರತಿಯೊಂದು ಜೀವಿಗಳಲ್ಲಿ ಅವರ ಆರ್ದಶಗಳನ್ನು, ತತ್ವಗಳನ್ನು ಪಾಲಿಸಿ, ಅಪರೂಪದ ಸಂತರೆಂದು ಅವರ ಬದುಕಿನ ಗುಣದಾನ ಮಾಡಿ ಭಕ್ತಿಯಿಂದ ಸ್ಮರಿಸಿದರು.

ಮನುಷ್ಯನ ಸ್ವಭಾವವನ್ನು ಒಂದೇ ಸಲ ತಿದ್ದಲು ಸಾಧ್ಯವಿಲ್ಲ. ಪ್ರತಿನಿತ್ಯ ಪ್ರವಚನ, ಆಧ್ಯಾತ್ಮಿಕ ಚಟುವಟಿಕಗಳಿಗೆ ನಮ್ಮನ್ನು ನಾವೇ ತೊಡಗಿಸಿಕೊಳ್ಳುವುದರ ಮುಖಾಂತರ ಪೂಜ್ಯರು ಹೇಳಿದ ಮಾತನ್ನು ನಮ್ಮ ವೈಯಕ್ತಿಕ ಬದುಕಿಗೆ ಅಳವಡಿಸಿಕೊಳ್ಳುವ ಮೂಲಕ ಒಂದು ಸ್ವಲ್ಪ ಬದಲಾವಣೆಯಾಗಲಿಕ್ಕೆ ಸಾಧ್ಯವಿದೆ. ಗುರುವಿನ ಕೃಪೆಗೆ ಪಾತ್ರರಾಗಬೇಕಾದರೇ ಪೂಜ್ಯರುಗಳು ಮಾಡಿಹೊದ ಕೆಲಸಗಳನ್ನು ನಮ್ಮ ಜೊತೆಗೆ ಇವೆ. ಆ ಪರಂಪರೆಯನ್ನು ಮಂದುವರಿಸುವಂತಹ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡೋಣ ಪ್ರತಿ ವರ್ಷವು ಗುರು ನಮನ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಲಿ ನಡೆಯಲಿ ನಮ್ಮ ಬದುಕಿನಲ್ಲಿ ಒಂದಿಷ್ಟು ಬದಲಾವಣೆ ತರಲಿ ಎಂದರು.

ಶ್ರೀ ಮಹೇಶಾನಂದ ಮಹಾಸ್ವಾಮಿಗಳು ಪೂಜ್ಯಶ್ರೀ ಷಡಕ್ಷರಿ ಮಹಾಸ್ವಾಮಿಗಳು, ನಾರಾಯಣ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಪ್ರಮುಖರಾದ ಮಾರುತಿ ತೋಳಮರಡಿ, ಹಾಲಪ್ಪ ಮಳಿವಡೇರ, ಮಾರುತಿ ಪೂಜೇರಿ, ಭಗವಂತ ಧರ್ಮಟ್ಟಿ, ಶಂಕರ ಧರ್ಮಟ್ಟಿ ಸೇರಿದಂತೆ ಸ್ಥಳೀಯ ಮುಖಂಡರು, ಆಶ್ರಮದ ಭಕ್ತಾದಿಗಳು ಉಪಸ್ಥಿತರಿದ್ದರು,