ಬೆಳಗಾವಿ :
ಅಖಿಲ ಭಾರತ ವೀರಶೈವ ಮಹಾಸಭೆ, ಜಿಲ್ಲಾ ಘಟಕ ಬೆಳಗಾವಿ
ಬಸವೇಶ್ವರ ಜಯಂತಿ ಉತ್ಸವ ಸಮಿತಿ, ಬೆಳಗಾವಿ ಇವರ ವತಿಯಿಂದ
ಬಸವ ಜಯಂತಿ ಅಂಗವಾಗಿ ಪ್ರಬಂಧ ಸ್ಪರ್ಧೆ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಆಚರಣೆ ನಿಮಿತ್ತ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಮತ್ತು ಎಲ್ಲ ವಯೋಮಿತ ಹಿರಿಯ ನಾಗರಿಕರಿಗೆ ಐದು ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು 28 ಎಪ್ರಿಲ್ ರಂದು ಮುಂಜಾನೆ 10 ಗಂಟೆಗೆ ಕೆಎಲ್‌ಇ ಸಂಸ್ಥೆಯ ಬೆಳಗಾವಿಯ ಜಿ. ಎ. ಪ್ರೌಢಶಾಲೆಯಲ್ಲಿ ಆಯೋಜಿಸಿದೆ.

ಪ್ರಾಥಮಿಕ ವಿಭಾಗ
ವಿಷಯ : ‘ಬಸವಣ್ಣನವರ ಬಾಲ್ಯ ಜೀವನ’ ನಗದು ಬಹುಮಾನ ಪ್ರಥಮ – 2೦೦೦
ದ್ವಿತೀಯ – 15೦೦
ತೃತೀಯ – 1೦೦೦
ಪ್ರೋತ್ಸಾಹದಾಯಕ – 25೦

ಮಾಧ್ಯಮಿಕ ವಿಭಾಗ
ವಿಷಯ : ‘ಮಹಾಮಾತೆ ಅಕ್ಕ ನಾಗಮ್ಮನವರು’
ನಗದು ಬಹುಮಾನ ಪ್ರಥಮ – 2೦೦೦
ದ್ವಿತೀಯ – 15೦೦
ತೃತೀಯ – 1೦೦೦
ಪ್ರೋತ್ಸಾಹದಾಯಕ – 25೦

ಪದವಿಪೂರ್ವ ವಿಭಾಗ
ವಿಷಯ: ‘ಶರಣರ ವಚನಗಳಲ್ಲಿ ಪ್ರಕೃತಿ ಪ್ರೀತಿ’
ನಗದು ಬಹುಮಾನ ಪ್ರಥಮ – 2೦೦೦
ದ್ವಿತೀಯ – 15೦೦
ತೃತೀಯ – 1೦೦೦
ಪ್ರೋತ್ಸಾಹದಾಯಕ – 25೦

ಪದವಿ ಹಾಗೂ ಸ್ನಾತಕೋತ್ತರ ವಿಭಾಗ
ವಿಷಯ: ‘ಸಮಾಜ ಸುಧಾರಕ ಬಸವಣ್ಣನವರು’
ನಗದು ಬಹುಮಾನ ಪ್ರಥಮ – 4೦೦೦
ದ್ವಿತೀಯ – 25೦೦
ತೃತೀಯ – 15೦೦
ಪ್ರೋತ್ಸಾಹದಾಯಕ – 5೦೦

ಎಲ್ಲ ವಯೋಮಾನದವರಿಗೆ
ವಿಷಯ : ‘ಶಿವಶರಣೆಯರ ದೃಷ್ಟಿಯಲ್ಲಿ ನುಡಿ ಪರಿಕಲ್ಪನೆ’
ನಗದು ಬಹುಮಾನ ಪ್ರಥಮ – 5೦೦೦
ದ್ವಿತೀಯ – 3೦೦೦
ತೃತೀಯ – 3೦೦೦
ಪ್ರೋತ್ಸಾಹದಾಯಕ – 1೦೦೦

ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಬಸವ ಜಯಂತಿಯಂದು ವಿತರಿಸಲಾಗುವುದು. ಆಸಕ್ತ ಸ್ಪರ್ಧಾಳುಗಳು ದಿನಾಂಕ 15 ಎಪ್ರಿಲ್ ಒಳಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ, ಲಿಂಗಾಯತ ಭವನದಲ್ಲಿ ಹೆಸರನ್ನು ನೋಂದಾಯಿಸಬಹುದು ಅಥವಾ ಕಾರ್ಯಾಲಯದ ಪ್ರಸಾದ ಹಿರೇಮಠ ಮೊ.ನಂ.೯೪೪೮೩೦೮೬೬೩, ಪ್ರವೀಣ ತವಕರಿ ಮೊ.ನಂ. ೯೧೬೪೩೪೫೨೦೮ ಇವರನ್ನು ಸಂಪರ್ಕಿಸಬೇಕು ಎಂದು ಅ.ವೀ.ಲಿಂ.ಮಹಾಸಭೆ, ಬೆಳಗಾವಿಯ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹಾಗೂ ಬಸವ ಜಯಂತಿ ಉತ್ಸವ ಸಮಿತಿ, ಬೆಳಗಾವಿ ಅಧ್ಯಕ್ಷ ಗುರುದೇವ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.