ಬೆಳಗಾವಿ : ಪ್ರಸ್ತುತ ಸಾಲಿನಲ್ಲಿ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸುವ ತೆರಿಗೆದಾರರಿಗೆ ಶೇಕಡಾ 5 ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಜು.31 ರವರೆಗೆ ವಿಸ್ತರಿಸಲಾಗಿದೆ.
ತೆರಿಗೆದಾರರಿಗೆ ತಮ್ಮ ಆಸ್ತಿ ತೆರಿಗೆಯನ್ನು ಆನ್ಲೈನ್ ಮೂಲಕ ಪಾವತಿಸುವ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಸಾಫ್ಟ್ ವೇರ್ನ್ನು ಪಾಲಿಕೆಯ ವತಿಯಿಂದ ಅಭಿವೃದ್ಧಿ ಪಡಿಸಲಾಗಿರುತ್ತದೆ.
ಆಸ್ತಿ ತೆರಿಗೆದಾರರು ಈಗಾಗಲೇ ತಮ್ಮ ಆಸ್ತಿ ತೆರಿಗೆಯ ಕುರಿತು ಇರುವ ಗಣಕೀಕೃತ ಫಾರ್ಮ-೧ ಪಡೆದವರು ಬೆಳಗಾವಿ-೧ ಕೇಂದ್ರಗಳಲ್ಲಿ ಹಾಗೂ ಆನ್ಲೈನ್ ಮೂಲಕವೂ ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಸ್ತಿ ತೆರಿಗೆದಾರರು ಪಾಲಿಕೆಯ ವೆಬ್ಸೈಟ್ ವೀಕ್ಷಿಸಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.