ಬೆಳಗಾವಿ: ಮಾಜಿ ಎಂಎಲ್ ಸಿ ವಿಜಯಪುರದ ಅರುಣ ಶಹಾಪೂರ ಹೆಸರಲ್ಲಿ ಇನ್ ಸ್ಟಾಗ್ರಾಂ ನಲ್ಲಿ ನಕಲಿ ಖಾತೆ ತೆರೆಯಲಾಗಿದೆ. ಈ ಖಾತೆಯಲ್ಲಿ ಮಾಜಿ ಎಮ್ಮೆಲ್ಸಿ ಅರುಣ ಶಹಾಪುರ ಅವರ ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಹಲವರಿಗೆ ಸ್ನೇಹದ ಮನವಿ ಕಳಿಸಲಾಗಿದೆ. ಫಾಲೋ ಮಾಡಿದವರಿಗೆ ಹಣದ ಬೇಡಿಕೆ ಇಡಲಾಗುತ್ತಿದೆ. ಈ ಖಾತೆ ಇನ್ನೂ ಚಾಲ್ತಿಯಲ್ಲಿದೆ.