ಬೈಲಹೊಂಗಲ: ಸಾಲಬಾಧೆ ತಾಳದೆ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸಮೀಪದ ಆಲದಕಟ್ಟಿ ಕೆ.ಎಂ.ಗ್ರಾಮಲ್ಲಿ ಭಾನುವಾರ ನಡೆದಿದೆ. ಕುತ್ಸುದ್ದೀನ್ ಅಜೇಸಾಬ ನದಾಫ (42) ಮೃತ ರೈತ. ಈತ ಕೃಷಿ ಚಟುವಟಿಕೆಗೆಂದು ಯರಗಟ್ಟಿ ಪಟ್ಟಣದ ಹಲವು ಖಾಸಗಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರು.

ಬೆಳೆ ನಷ್ಟವಾಗಿದ್ದರಿಂದ ರೈತ ವಿಷ ಕುಡಿದಿದ್ದ. ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.