ಬೆಳಗಾವಿ :
ರವಿವಾರ ತಡರಾತ್ರಿ ಪೊಲೀಸ್ ಬಂಧನಕ್ಕೊಳಗಾಗಿದ್ದ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಅಭಿಜಿತ್ ಜವಳಕರ್ ಅವರು ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ.

ಅವರು ಬಿಡುಗಡೆಗೊಳ್ಳುತ್ತಲೇ ಹಿಂಡಲಗಾ ಜೈಲಿನ ಬಳಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಅವರ ಪರ ಘೋಷಣೆ ಕೂಗಿ ಬರಮಾಡಿಕೊಂಡರು.

ಭಾಗ್ಯನಗರದಲ್ಲಿ ಮೊಬೈಲ್ ಟವರ್ ವಿಷಯವಾಗಿ ರಮೇಶ ಪಾಟೀಲ ಹಾಗೂ ಅಭಿಜಿತ ಜವಳ್ಕರ್ ನಡುವೆ ನಡೆದ ವಾಗ್ವಾಗದ ಹಿನ್ನೆಲೆಯಲ್ಲಿ ಜವಳ್ಕರ್ ಅವರನ್ನು ಪೊಲೀಸರು ರವಿವಾರ ಬಂಧಿಸಿದ್ದರು.