ಬೆಳಗಾವಿ: ಕನ್ನಡ-ಮರಾಠಿ ಭಾಷೆಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಆರೋಪದ ಮೇರೆಗೆ ಎಂಇಎಸ್ ಮುಖಂಡ ಶುಭಂ ಶೆಳಕೆಯನ್ನು ಮಾರ್ಕೆಟ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಈಗಾಗಲೇ ಶೆಳಕೆ ಮೇಲೆ ಖಡೇ ಬಜಾರ್, ಕ್ಯಾಂಪ್, ಮಾರ್ಕೆಟ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಭಾಷಾದ್ವೇಷಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಈ ನಡುವೆ ಶೆಳಕೆ ಮೊನ್ನೆಯಷ್ಟೇ ಉದ್ಯಮಿಯೊಬ್ಬರ ನಾಮಫಲಕದಲ್ಲಿ ಜೈ ಮಹಾರಾಷ್ಟ್ರ ಎಂದು ಬರೆದು ಭಾಷಾದ್ವೇಷಕ್ಕೆ ಕಾರಣನಾಗಿದ್ದನ್ನು ಇಲ್ಲಿ ನೆನಪಿಸಬಹುದು.