ಧಾರವಾಡ: ಧಾರವಾಡ ಕ್ಷೇತ್ರದ ಲೋಕಸಭೆ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಅವರು ಎರಡು ಪ್ರತಿ ನಾಮಪತ್ರ ಸಲ್ಲಿಸಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿ ಅವರು ಕೇಂದ್ರದ ಪ್ರಭಾವಿ ಸಚಿವ ಬಿಜೆಪಿಯ ಪ್ರಹ್ಲಾದ ಜೋಶಿ ಅವರ ವಿರುದ್ಧ ಚುನಾವಣೆಯಲ್ಲಿ ಸಮರ ಸಾರಿದ್ದು ಪಕ್ಷೇತರರಾಗಿ ಅವರ ಸ್ಪರ್ಧೆ ಈಗ ನಾಡಿನ ಗಮನ ಸೆಳೆದಿದೆ.