ರಾಮದುರ್ಗ : ಬೆಳಗಾವಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಶುಕ್ರವಾರ ರಾಮದುರ್ಗ ತಾಲೂಕಿನಲ್ಲಿ ಭರ್ಜರಿ ಪ್ರಚಾರ ನಡೆಯಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ, ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಸೇರಿದಂತೆ ಹಲವಾರು ನಾಯಕರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 9.30ಕ್ಕೆ ಹಲಗತ್ತಿ, 10 ಗಂಟೆಗೆ ಲಿಂಗದಾಳ, 10.30ಕ್ಕೆ ಇಡಗಲ್, 11ಕ್ಕೆ ಚಿಕ್ಕಮೂಡಲಗಿ, 11.30ಕ್ಕೆ ಚಿಕ್ಕ ತಡಸಿ, ಮಧ್ಯಾಹ್ನ 12ಕ್ಕೆ ಹಂಪಿಹೊಳಿಯಲ್ಲಿ ಪ್ರಚಾರ ನಡೆಯಲಿದೆ.
12.30ಕ್ಕೆ ಸುರೇಬಾನ್ ಎಪಿಎಂಸಿ ಆವರಣದಲ್ಲಿ ಹಲಗತ್ತಿ ಹಾಗೂ ಸುರೇಬಾನ್ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಬಹಿರಂಗ ಸಭೆ ನಡೆಯಲಿದೆ.
ಸಂಜೆ 4 ಗಂಟೆಗೆ ರಾಮದುರ್ಗದ ರಾಯಣ್ಣ ವೃತ್ತದಿಂದ ಯುವಶಕ್ತಿ ಬೈಕ್ ರ್ಯಾಲಿ ನಡೆಯಲಿದೆ. ನಂತರ 5.30ಕ್ಕೆ ರಾಮದುರ್ಗ ಕಾರ್ ಸ್ಟ್ಯಾಂಡ್ ನಲ್ಲಿ ಬಹಿರಂಗ ಸಭೆ ನಡೆಯಲಿದೆ.