ಬೆಳಗಾವಿ: ಅಥಣಿ ತಾಲೂಕು ಖಿಳೇಗಾಂವ ಗ್ರಾಮದಲ್ಲಿ ಇತ್ತೀಚಿಗೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅತ್ಯಾಪ್ತ ಅಣ್ಣಪ್ಪ ನಿಂಬಾಳ ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೊನೆಗೂ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಂಡೆಗಾಂವ ಗ್ರಾಮದ ವಿಠಲ ಶ್ರವಣಕುಮಾರ ಪೂಜೇರಿ (30), ಶಿರೂರು ಗ್ರಾಮದ ಶಿವಾಜಿ ಲಹು ಹಜಾರೆ (26), ಸುಖದೇವ ರಘುನಾಥ ಹಜಾರೆ (26) ಮತ್ತು ಸಂತೋಷ ಅವಜಿ ಹೊನಮೋರೆ (24) ಬಂಧಿತರು. 20 ಗುಂಟೆ ಜಮೀನು ಸಂಬಂಧ ಇವರು ಪ್ರಭಾವಿ ಕಾಂಗ್ರೆಸ್ ಮುಖಂಡನನ್ನು ಹತ್ಯೆ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ.