ಬೆಳಗಾವಿ :
ಕುಖ್ಯಾತ ಬೈಕ್ ಕಳ್ಳನನ್ನು ಬೆಳಗಾವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ನಗರ ಹಾಗೂ ಸುತ್ತಮುತ್ತ ಬೈಕ್ ಕಳ್ಳತನ ಪ್ರಕರಣಗಳು ಜರಗುತ್ತಿದ್ದು, ಅವುಗಳ ಪತ್ತೆಗಾಗಿ ಸ್ನೇಹಾ. ಪಿ. ವಿ. ಡಿಸಿಪಿ (ಅಪರಾಧ ಮತ್ತು ಸಂಚಾರ) ಬೆಳಗಾವಿ ನಗರ ಇವರ ಮಾರ್ಗದರ್ಶನದಲ್ಲಿ ಪಿಐ ಎಪಿಎಂಸಿ ಪೊಲೀಸ್ ಠಾಣೆ ಹಾಗೂ ಅಧೀನ ಸಿಬ್ಬಂದಿಯವರು ಹೊಂಚು ಹಾಕಿದಾಗ ಕಳ್ಳನ ಪತ್ತೆಯಾಗಿದೆ.
ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯ ಮುಂದೆ ಹಾಗೂ ಸಿವಿಲ್ ಹಾಸ್ಪಿಟಲ್ ಮುಂದೆ ನಿಲ್ಲಿಸಿ ಇಡುತ್ತಿದ್ದ ಮೋಟರ್ ಸೈಕಲ್ ಕಳ್ಳತನ ಬಗ್ಗೆ ಆರೋಪಿತರ ಪತ್ತೆಗಾಗಿ ನಿಖರವಾದ ಮಾಹಿತಿ ಕಲೆ ಹಾಕಲಾಯಿತು.
ಕೊನೆಗೂ ಆರೋಪಿ ವಿಠ್ಠಲ ಸದೇಪ್ಪಾ ಆರೇರ, (35), ಸಾ: ಶೀಗಿಹಳ್ಳಿ ತಾ: ಬೈಲಹೊಂಗಲ ಜಿಲ್ಲಾಃ ಬೆಳಗಾವಿ. ಈತನನ್ನು ವಶಕ್ಕೆ ಪಡೆದುಕೊಂಡು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಈತ ಹಲವಾರು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಆತನ ವಶದಲ್ಲಿದ್ದ ಸುಮಾರು ರೂ.3,35,000/- ಮೌಲ್ಯದ 13 ಮೋಟರ್ ಸೈಕಲ್ (ಹೀರೋ ಹೊಂಡಾ ಸ್ಪೆಂಡರ್ -9, ಹೀರೋ ಎಚ್ಎಫ್ ಡಿಲಕ್ಸ್ -2, ಹೀರೋ ಹೊಂಡಾ ಸಿ.ಡಿ ಡಿಲಕ್ಸ್ -1 ಹಾಗೂ ಹೀರೋ ಹೊಂಡಾ ಪ್ಯಾಶನ್ ಪ್ಲಸ್-1) ಗಳನ್ನು ವಶಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರಿಸಲಾಗಿದೆ.
ಪ್ರಕರಣದಲ್ಲಿ ಎಪಿಎಂಸಿ ಪೊಲೀಸ್ ಠಾಣೆಯ ಮಂಜುನಾಥ ಭಜಂತ್ರಿ ಪಿಎಸ್ಐ, ತ್ರಿವೇಣಿ ನಾಟೀಕರ, ಪಿಎಸ್ಐ, ಕಿರಣ ಸಿ ಹೊನಕಟ್ಟಿ, ಪಿಎಸ್ಐ, ಬಿ ಕೆ ಮಿಟಗಾರ, ಎ.ಎಸ್.ಐ, ವಿ.ಡಿ. ಬಾಬಾನಗರ, ಡಿ. ಸಿ. ಸಾಗರ, ಬಸವರಾಜ ಬಾನಸೆ, ಕೆಂಪಣ್ಣ ದೊಡಮನಿ, ನಾಮದೇವ ಲಮಾಣಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಬೆಳಗಾವಿ ನಗರ ಅವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.