ಅಬುಧಾಬಿ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ‘ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ’(ಬಿಎಪಿಎಸ್) ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 14ರಂದು ಉದ್ಘಾಟಿಸಲಿದ್ದಾರೆ. ಯುಎಇಯಲ್ಲಿ ಕಲ್ಲಿನಿಂದ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವಿದು.
ಪ್ರಧಾನಿ ಮೋದಿ ಅವರು ಎರಡು ದಿನಗಳ ಯುಎಇ ಪ್ರವಾಸ ಇದಾಗಿದೆ.
ಕಲ್ಲಿನ ಸೇವೆ:
‘ದೇವಸ್ಥಾನ ಆವರಣದಲ್ಲಿ ಭಾರತ ಮೂಲದ ಮಕ್ಕಳು ಮೂರು ತಿಂಗಳಿಂದ ಪ್ರತಿ ವಾರಾಂತ್ಯ ‘ಕಲ್ಲಿನ ಸೇವೆ’ ಸಲ್ಲಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಹಾಜರಾಗುವ ಅತಿಥಿಗಳಿಗೆ ಉಡುಗೊರೆ ನೀಡುವ ಸಲುವಾಗಿ ಕಲ್ಲುಗಳ ಮೇಲೆ ವರ್ಣಚಿತ್ರ ರಚಿಸುತ್ತಿದ್ದಾರೆ. ಇದಕ್ಕೆ ‘ಟೈನಿ ಟ್ರೆಶರ್ಸ್’ ಎಂದು ಹೆಸರಿಡಲಾಗಿದೆ. ಸದ್ಯ ಈ ಕಲಾಕೃತಿಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ’ ಎಂದು 12 ವರ್ಷ ವಯಸ್ಸಿನ ಬಾಲಕಿ ತಿಥಿ ಪಟೇಲ್ ತಿಳಿಸಿದ್ದಾಳೆ.
ಈ ವಾರಾಂತ್ಯದ ಚಟುವಟಿಕೆಯನ್ನು ಆಕೆ ಮತ್ತು ಆಕೆಯ ಸ್ನೇಹಿತರು ಆನಂದಿಸುತ್ತಿರುವುದಾಗಿ ಹೇಳಿದ್ದಾಳೆ.
‘ದೇವಸ್ಥಾನ ನಿರ್ಮಾಣ ಸ್ಥಳದಲ್ಲಿ ದೊರಕುವ ಚಿಕ್ಕ ಕಲ್ಲುಗಳನ್ನು ಆಯ್ದು, ಅವನ್ನು ಸ್ವಚ್ಛಗೊಳಿಸಿ ಪೇಯಿಂಟ್ ಮಾಡಲಾಗಿದೆ. ನಂತರ ವಾರ್ನಿಷ್ ಬಳಿಯಲಾಗಿದೆ. ಕಲ್ಲಿನ ಒಂದು ಬದಿಯಲ್ಲಿ ಹಿತೋಪದೇಶ ಬರೆದಿದ್ದರೆ, ಮತ್ತೊಂದು ಬದಿಯಲ್ಲಿ ದೇವಸ್ಥಾನದ ಯಾವುದಾದರೂ ಒಂದು ಭಾಗವನ್ನು ಚಿತ್ರಿಸಲಾಗಿದೆ. ಸದ್ಯ ಅವುಗಳನ್ನು ಉಡುಗೊರೆ ಪೊಟ್ಟಣದಲ್ಲಿ ಇರಿಸಲಾಗುತ್ತಿದೆ’ ಎಂದು ಎಂಟು ವರ್ಷ ವಯಸ್ಸಿನ ರೇವಾ ಕಾರಿಯ ತಿಳಿಸಿದ್ದಾಳೆ.
‘ಅಹ್ಲಾನ್ ಮೋದಿ’– ವೀಕ್ಷಕರ ಸಂಖ್ಯೆ ಕಡಿತ
ಅಬುದಾಭಿಯ ಝಾಯೆದ್ ಸ್ಪೋರ್ಟ್ಸ್ ಸಿಟಿಯಲ್ಲಿ ಮಂಗಳವಾರದಂದು ‘ಅಹ್ಲಾನ್ ಮೋದಿ’ (ಹೆಲೊ ಮೋದಿ) ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೋದಿ ಅವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದರು.