ಕೋಲ್ಕತ್ತಾ: ಈ ವರ್ಷದ ಏಪ್ರಿಲ್ 18ರ ರಾಮ ನವಮಿಯನ್ನು ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ.
ದುರ್ಗಾ ಪೂಜೆ, ಕಾಳಿ ಪೂಜೆ ಮತ್ತು ಸರಸ್ವತಿ ಪೂಜೆ ಇವು ಪಶ್ಚಿಮ ಬಂಗಾಳದ ಪ್ರಮುಖ ಹಬ್ಬಗಳು. ರಾಮ ನವಮಿಗೆ ಇದೇ ಮೊದಲ ರಾಜ್ಯದಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ನಿರೀಕ್ಷೆಯಿರುವ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಮಮತಾ ಬ್ಯಾನರ್ಜಿ ಸರ್ಕಾರದಿಂದ ಈ ಕ್ರಮವು ಬಂದಿದೆ. ಈ ಹಿಂದೆ ರಾಮನವಮಿ ಹಬ್ಬದಂದು ಮೆರವಣಿಗೆ ನಡೆಯುವ ವೇಳೆ ಬಂಗಾಳದ ಕೆಲವೆಡೆ ಹಿಂಸಾಚಾರಗಳಾಗಿ, ಬಂಗಾಳ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಅದರ ಬೆನ್ನಲ್ಲೇ ಲೋಕಸಭೆ ಚುನಾವಣೆಗೆ ಮುನ್ನ ಸರ್ಕಾರ ರಾಮನವಮಿಗೆ ರಜೆ ಘೋಷಿಸುವ ನಿರ್ಧಾರ ಮಾಡಿದೆ.

ರಾಮನವಮಿಯನ್ನು ಸಾರ್ವಜನಿಕ ರಜೆ ಎಂದು ಗೊತ್ತುಪಡಿಸುವ ಬಂಗಾಳ ಸರ್ಕಾರದ ಅಧಿಸೂಚನೆಯನ್ನು ಹಂಚಿಕೊಂಡಿರುವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು., “ಜೈ ಶ್ರೀ ರಾಮ” ಎಂದು ಕೇಳಿದಾಗಲೆಲ್ಲ ಕೋಪಗೊಳ್ಳುತ್ತಿದ್ದ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ರಾಮನವಮಿಯನ್ನು (17ನೇ ಏಪ್ರಿಲ್) ಸಾರ್ವಜನಿಕ ರಜೆ ಎಂದು ಗೊತ್ತುಪಡಿಸಿದ್ದಾರೆ. ಅವರು ತಮ್ಮ ಹಿಂದೂ ವಿರೋಧಿ ಇಮೇಜ್ ಅನ್ನು ಅಳಿಸಿ ಹಾಕಲು ತಡವಾದರೂ ಇದನ್ನು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ರಾಮನವಮಿಗೆ ರಜೆಯೇನೋ ನೀಡಿದ್ದಾರೆ. ಆದರೆ, ಈ ಬಾರಿಯಾದರೂ ರಾಮನವಮಿ ಮೆರವಣಿಗೆಯಲ್ಲಿ ಕಲ್ಲು ತೂರಾಟವಾಗದಂತೆ ಭದ್ರತೆ ಏರ್ಪಡಿಸುತ್ತಾರಾ ನೋಡಬೇಕು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಾದರೂ ಅಮಿತ್ ಪ್ರಶ್ನಿಸಿದ್ದಾರೆ.. ಬಿಜೆಪಿ ನಾಯಕರ ಹೇಳಿಕೆಗೆ ತೃಣಮೂಲ ಕಾಂಗ್ರೆಸ್‌ ಇನ್ನೂ ಪ್ರತಿಕ್ರಿಯಿಸಿಲ್ಲ.

ಸಂದೇಶ್‌ಖಾಲಿ ವಿವಾದದ ನಂತರ ಬಿಜೆಪಿ ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ. ಈ ಪ್ರಕರಣದಲ್ಲಿ ಪ್ರಬಲ ವ್ಯಕ್ತಿ ಮತ್ತು ತೃಣಮೂಲ ಮಾಜಿ ನಾಯಕ ಶೇಖ್ ಷಹಜಹಾನ್ ಅವರನ್ನು ಕಳೆದ ವಾರ ಬಂಧಿಸಲಾಯಿತು. ಉತ್ತರ 24 ಪರಗಾನಾಸ್ ಜಿಲ್ಲೆಯ ದ್ವೀಪ ಗ್ರಾಮದಲ್ಲಿ ಷಹಜಹಾನ್ ಲೈಂಗಿಕ ದೌರ್ಜನ್ಯ ಮತ್ತು ಭೂಸ್ವಾಧೀನದ ಅನೇಕ ಆರೋಪಗಳನ್ನು ಎದುರಿಸುತ್ತಿದ್ದಾರೆ.