ಪಾಟ್ನಾ :
ಪರೀಕ್ಷೆ ಬಂತೆಂದರೆ ವಿದ್ಯಾರ್ಥಿಗಳಿಗೆ ದುಗುಡ ಯಾಕಾಗಿ ಈ ಪರೀಕ್ಷೆ ಬರುತ್ತದೆ ಎಂದು ಕೆಲವರು ಅಂದುಕೊಳ್ಳುತ್ತಾರೆ. ಅದರಲ್ಲೂ ಕೆಲ ವಿದ್ಯಾರ್ಥಿಗಳು ದಯವಿಟ್ಟು ನಮ್ಮನ್ನು ಈ ಬಾರಿ ಪಾಸ್ ಮಾಡಿ ಎಂದು ಮೌಲ್ಯಮಾಪಕರಾದಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಇದೀಗ ಹೀಗೊಂದು ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಹಾರದ 10 ನೇ ತರಗತಿ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳು ವಿಚಿತ್ರ ಉತ್ತರಗಳನ್ನು ಬರೆದಿದ್ದಾರೆ. ವಿದ್ಯಾರ್ಥಿಯೊಬ್ಬಳು ಬರೆದ ಭಾವನಾತ್ಮಕ ಪತ್ರವೊಂದು ವೈರಲ್ ಆಗಿದೆ. ನಾನು ಬಡ ಹುಡುಗಿ. ದಯವಿಟ್ಟು ನನ್ನನ್ನು ಪಾಸ್ ಮಾಡಿ ಸರ್. ಇಲ್ಲವಾದರೆ ನನ್ನ ತಂದೆ ನನಗೆ ಮದುವೆ ಮಾಡುತ್ತಾರೆ. ನನಗೆ ಮದುವೆ ಇಷ್ಟವಿಲ್ಲ. ನನ್ನ ಗೌರವ ಉಳಿಸಿ ಎಂದು ಬರೆದಿದ್ದಾಳೆ. ಇನ್ನು ಕೆಲವರು ಕವನ, ಸಿನಿಮಾ, ಕಥೆ ಬರೆದಿದ್ದಾರೆ. ಮೌಲ್ಯಮಾಪನ ಮಾಡುವ ಶಿಕ್ಷಕರು ಆ ಉತ್ತರಗಳನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.