ಖಾನಾಪುರ : ತಾಲೂಕಿನ ಹಿರೇ ಅಂಗ್ರೋಳಿ  ಗ್ರಾಮದಲ್ಲಿ  ಕಾಡಾನೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಕಾಡಾನೆ ಹಿರೇ ಅಂಗ್ರೋಳಿ ಗ್ರಾಮಕ್ಕೆ ಆಗಮಿಸಿದ  ಸುದ್ದಿ ತಿಳಿದ ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ  ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯನ್ನು ಮರಳಿ ಕಾಡಿಗೆ ಕಳಿಸುವ  ಕಾರ್ಯದಲ್ಲಿ ತೊಡಗಿದ್ದಾರೆ,
ಕಾಡಾನೆ ಕುಣಕಿಕೊಪ್ಪ, ಬೇಕ್ವಾಡ, ಕಸಬಾನಂದಗಡ, ಹಾಗೂ ನಂದಗಡ ಗ್ರಾಮದ ಮಾರ್ಗವಾಗಿ ಕಾಡಿಗೆ ಸಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಕಾಡಿಗೆ ಕಳಿಸಲು ಹರಸಾಹಸ ಪಡುತ್ತಿದ್ದಾರೆ.
ನಂದಗಡ ಗ್ರಾಮದಲ್ಲಿ ಅರಣ್ಯ ಇಲಾಖೆಯ ಗೊಲ್ಲಿಹಳ್ಳಿ ಹಾಗೂ ನಂದಗಡ ಉಪ ವಿಭಾಗದ ಅಧಿಕಾರಿಗಳು ಹಾಗೂ ನಂದಗಡ ಪೊಲೀಸ್ ಠಾಣೆಯ ಅಧಿಕಾರಿಗಳು ಧಾವಿಸಿದ್ದಾರೆ. ಆನೆಯನ್ನು ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ.
ಗೊಲ್ಲಿಹಳ್ಳಿ ಉಪ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಅಶೋಕ್ ಬಿ ಹುಲಿ, ನಂದಗಡ ಉಪ ವಲಯಾರಣ್ಯಾಧಿಕಾರಿ ಮಹೇಶ ಲಕ್ಷ್ಮಣ ಲಚ್ಯಾಣ, ನಂದಗಡ ಪೊಲೀಸ್ ಠಾಣೆಯ ಎಎಸ್‌ಐ ಮೊಕಾಶಿ, ಶಿವಕುಮಾರ್‌ ತುರಮುಂಡಿ, ಅರಣ್ಯ ಇಲಾಖೆಯ ಈರಪ್ಪ ಕರ್ಲಿಂಗಣ್ಣನವರ್‌, ಮಲ್ಲೇಶ್‌ ಬಿರಾದಾರ್‌, ಗಿರೀಶ್‌ ಮೆಕ್ಕಡೆ ಮತ್ತಿತರರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.