ಬೆಳಗಾವಿ: ನೇಕಾರರ ಕಷ್ಟಗಳಿಗೆ ಸದಾ ಸ್ಪಂದಿಸುವಲ್ಲಿ ಬಿಜೆಪಿ ಸರ್ಕಾರ ಮುಂದಾಗಿದೆ.
ರಾಮದುರ್ಗ ತಾಲೂಕಿನ ನೇಕಾರ ಸಮುದಾಯದ ಕೃಷ್ಣಗಳನ್ನು ಅತ್ಯಂತ ಹತ್ತಿರದ ಕಂಡಿದ್ದು, ನಾನು ಶಾಸಕರಾಗಿದ್ದ ಸಂದರ್ಭದಲ್ಲಿ ನೇಕಾರ ಸಮುದಾಯದಲ್ಲಿ ವಾಸಿಸುವ ಕಾಲೋನಿಗಳ ಅಭಿವೃದ್ಧಿ ಪಡಿಸಲಾಗಿದೆ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ತಿಳಿಸಿದರು.
ಲೋಕಸಭಾ ಚುನಾವಣೆಯ ಅಂಗವಾಗಿ ರಾಮದುರ್ಗ ಪಟ್ಟಣದ ನೇಕಾರ ಪೇಠನಲ್ಲಿ ಬಹಿರಂಗ ಸಭೆ ನಡೆಸಿ, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಈ ಹಿಂದೆ ಎಂದು ಕಂಡು ಕೇಳರಿಯದ ಪ್ರವಾಹ ಉಂಟಾಗಿ ಸಾಕಷ್ಟು ಮಗ್ಗಗಳು ಹಾಗೂ ಮನೆ ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ಪ್ರತಿ ನೇಕಾರರ ಮಗ್ಗಗಳಿಗೆ 25 ಸಾವಿರ ಹಾಗೂ ಮನೆಗಳ ನಿರ್ಮಾಣಕ್ಕೆ 5 ಲಕ್ಷ ಪರಿಹಾರ ನೀಡಿದೆ ಎಂದು ತಿಳಿಸಿದರು.
ಇಂದು ನೇಕಾರರ ಬದುಕು ಅತ್ಯಂತ ಕಷ್ಟಕರವಾಗಿದ್ದು, ಅವರಿಗೆ ಮೂಲ ಸೌಕರ್ಯ ಕಲ್ಪಿಸಲು ಜಗದೀಶ್ ಶೆಟ್ಟರ್ ಅವರು ಪ್ರಯತ್ನ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಮತ್ತೋಮ್ಮೆ ಪ್ರಧಾನಿ ಆಗುವುದು ಎಷ್ಟು ಸತ್ಯವೋ. ಅಷ್ಟೇ ಜಗದೀಶ್ ಶೆಟ್ಟರ್ ಗೆಲುವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಮಾಜಿ ವಿಧಾನಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಎಂ.ಡಿ. ಲಕ್ಷ್ಮೀ ನಾರಾಯಣ, ರಾಜ್ಯ ನೇಕಾರ ಪ್ರಕೋಷ್ಠದ ಸಂಚಾಲಕ ಬಿ.ಎಸ್. ಸೋಮಶೇಖರ್, ಪ್ರಮುಖರಾದ ಗಜಾನನ ಗೋಜಿ,ಹರೀಶ ಕುಮಾರ್, ರಾಜು ಬೀಳಗಿ, ಶಂಕ್ರಣ್ಣ ಮುರಡಿ, ಈರಣ್ಣ ಅಂಗಡಿ, ಶ್ರೀ ಮಲ್ಲಣ್ಣ ಯಾದವಾಡ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಗುರುಹಿರಿಯರು, ಮಾತೆಯರು, ಯುವಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.