ನ್ಯೂಯಾರ್ಕ್: ಮಾಧ್ಯಮ ದಿಗ್ಗಜ ರೂಪರ್ಟ್ ಮುರ್ಡೋಕ್ ತಮ್ಮ 92ರ ಇಳಿ ವಯಸ್ಸಲ್ಲಿ 5ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ತಮ್ಮ ಗೆಳತಿ ಎಲೆನಾ ಜುಕೋವಾ ಅವರನ್ನು ಜೂನ್‌ನಲ್ಲಿ ವಿವಾಹವಾಗಲಿರುವುದಾಗಿ ರೂಪರ್ಟ್ ಘೋಷಣೆ ಮಾಡಿದ್ದಾರೆ. ಕಳೆದ ವರ್ಷ ಆನ್ ಲೆಸ್ಲಿ ಸ್ಮಿತ್ ಅವರೊಂದಿಗೆ ರೂಪರ್ಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ತಿಂಗಳಲ್ಲೇ ಅದು ಮುರಿದು ಬಿದ್ದಿತ್ತು. ಈಗ ವಿವಾಹವಾಗುತ್ತಿರುವ ಜುಕೋವಾ ಅಮೆರಿಕದ ನಿವೃತ್ತ ಜೀವಶಾಸ್ತ್ರಜ್ಞೆ. ರೂಪರ್ಟ್ ವಿವಾಹ ಕ್ಯಾಲಿಫೋರ್ನಿಯಾದ ಅವರ ಮೊರಗಾ ಎಸ್ಟೇಟ್‌ನಲ್ಲಿ ನಿಗದಿಯಾಗಿದೆ.
ಆಸ್ಟ್ರೇಲಿಯಾ ಮೂಲದ ಅಮೇರಿಕನ್ :
67 ವರ್ಷದ ಮಹಿಳೆ ಜತೆ ನಿಶ್ಚಿತಾರ್ಥ 92ರ ಹರೆಯದಲ್ಲಿಯೂ ಐದನೇ ಮದುವೆಗೆ ಮುರ್ಡೋಕ್ ಸಜ್ಜಾಗಿದ್ದಾರೆ.
ಆಸ್ಟ್ರೇಲಿಯನ್ ಮೂಲದ ಅಮೇರಿಕನ್ ಉದ್ಯಮಿ, ಹೂಡಿಕೆದಾರ ಮತ್ತು ಮಾಧ್ಯಮ ಮಾಲೀಕ ಮೊಗಲ್ ರೂಪರ್ಟ್ ಮುರ್ಡೋಕ್ ಅವರು ತಮ್ಮ 92 ವರ್ಷದ ಐದನೇ ಮದುವೆಗೆ ಸಜ್ಜಾಗಿದ್ದಾರೆ. ಅವರು ನಿವೃತ್ತ ಆಣಿಕ ಜೀವಶಾಸ್ತ್ರಜ್ಞೆ 67 ವರ್ಷದ ಎಲೆನಾ ಝುಕೋವಾ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ಮುರ್ಡೋಕ್ ಅವರು ಜೂನ್ 1 ರಂದು ತಮ್ಮ ಕ್ಯಾಲಿಫೋರ್ನಿಯಾದ ವೈನ್ಯಾರ್ಡ್ ಮತ್ತು ಎಸ್ಟೇಟ್ ಮೊರಾಗದಲ್ಲಿ ಝುಕೋವಾ ಅವರನ್ನು ವಿವಾಹವಾಗಲಿದ್ದಾರೆ. ವಿಶೇಷವೆಂದರೆ ಮುರ್ಡೋಕ್ ತನ್ನ ಮೂರನೇ ಪತ್ನಿ ವೆಂಡಿಡೆಂಗ್ ಮೂಲಕ ಝುಕೋವಾರನ್ನು ಕಳೆದ ಬೇಸಿಗೆಯಲ್ಲಿ ಭೇಟಿಯಾಗಿ ಪರಿಚಯ ಮಾಡಿಕೊಂಡಿದ್ದರು. ಆಕೆ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮಧು ಮೇಹ ಬಗ್ಗೆ ಅಧ್ಯಯನ ಮಾಡಿದ ನಿವೃತ್ತ ಆಣ್ವಿಕ ಜೀವಶಾಸ್ತ್ರಜ್ಞೆ. ಇವರಿಬ್ಬರ
ನಿಶ್ಚಿತಾರ್ಥ ವಿಚಾರವನ್ನು ನ್ಯೂಯಾರ್ಕ್ ಟೈಮ್ಸ್ ಮೊದಲು ವರದಿ ಮಾಡಿದ್ದು, ಮುರ್ಡೋಕ್, ವರ್ಷದ ಹಿಂದಷ್ಟೇ ನಿವೃತ್ತ ದಂತ ನೈರ್ಮಲ್ಯ ತಜ್ಞೆ ಆನ್ ಲೆಸ್ಲಿ ಸ್ಮಿತ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅದು ಕೆಲವೇ ವಾರ ಗಳಲ್ಲಿ ಮುರಿದುಬಿತ್ತು. ಮುರ್ಡೋಕ್ ಅವರಿಗೆ ಇದು ಐದನೇ ಮದುವೆ. ಈ ಹಿಂದೆ 2016 ರಲ್ಲಿ ಮಾಡೆಲ್ ಜೆರ್ರಿ ಹಾಲ್ ಅವರನ್ನು ವಿವಾಹವಾಗಿ 2022 ರವರೆಗೆ ಸಂಬಂಧ ಹೊಂದಿದ್ದರು.