ಬೆಳಗಾವಿ :‌
ಮುತಗಾದ ಗೋಕುಲನಗರದಲ್ಲಿ ಮನೆಯಲ್ಲಿದ್ದ ಲಕ್ಷಾಂತರ ರೂ.ಗಳ ಮೌಲ್ಯದ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.

ರಸ್ತೆ ಪಕ್ಕದ ಮನೆಯೊಂದಕ್ಕೆ ಸೋಮವಾರ ತಡರಾತ್ರಿ ಕನ್ನ ಹಾಕಿದ ಕಳ್ಳರು ಸುಮಾರು 40 ಗ್ರಾಂ (4 ತೊಲೆ) ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ.

ಮನೆಯವರು ಹೇಳುವ ಪ್ರಕಾರ 40 ಗ್ರಾಂ (4 ತೊಲೆ) ಎಂದಾದರೆ‌ ಮಾರಿಹಾಳ ಪೊಲೀಸ್ ಠಾಣೆಯಲ್ಲಿ 20 ಗ್ರಾಂ ಚಿನ್ನಾಭರಣ ಕಳವಾಗಿರುವ ಕುರಿತು ದೂರು ದಾಖಲಾಗಿದೆ. ಮಾರಿಹಾಳ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.