ಹುಬ್ಬಳ್ಳಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ನಡುವೆಯೇ ಹಾವೇರಿಯಲ್ಲಿ ಕಮಲ ನಾಯಕರಿಗೆ ಬಿಗ್ ಶಾಕ್ ಎದುರಾಗಿದ್ದು, ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿಯಲು ಬಿಜೆಪಿ ರೆಬಲ್ ನಾಯಕ, ಮಾಜಿ ಶಾಸಕ ನೆಹರು ಓಲೇಕಾರ ಮುಂದಾಗಿದ್ದಾರೆ ಎಂಬ ಸುದ್ದಿ ಹರಡಿದೆ.
ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನೆಹರು ಓಲೇಕಾರ ಅವರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದು, ಈ ಸಂಬಂಧ ಸಿಎಂ ಹಾಗೂ ಡಿಸಿಎಂ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ.

ಹಾವೇರಿ ಕಾಂಗ್ರೆಸ್ ಜಿಲ್ಲಾದ್ಯಕ್ಷ ಸಂಜೀವ ನೀರಲಗಿ ಅವರು ನೆಹರು ಓಲೇಕಾರವನ್ನು ಹೊಸಪೇಟೆಗೆ ಕರೆದೊಯ್ದುದಿದ್ದು, ಇಂದು ಸಿಎಂ ಮತ್ತು ಡಿಸಿಎಂ ಹಾಗೂ ಸಚಿವ ಮಹದೇವಪ್ಪ ಹೊಸಕೋಟೆಗೆ ಆಗಮಿಸಲಿದ್ದಾರೆ. ಈ ಹಿನ್ನಲೆ ಪ್ರಚಾರಕ್ಕೂ ಮೊದಲೇ ಓಲೇಕಾರ ಹಾಗೂ ಸಿಎಂ, ಡಿಸಿಎಂ ಅವರು ರಹಸ್ಯ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ .

ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವು ಬಗ್ಗೆ ಹಾಗೂ ಪಕ್ಷದಲ್ಲಿ ಸ್ಥಾನಮಾನದ ಬಗ್ಗೆ ಓಲೇಕಾರ ಅವರು ಸಿಎಂ-ಡಿಸಿಎಂ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.