ಬೆಂಗಳೂರು: ರಾಜ್ಯದ ಎಪಿಎಂಸಿಗಳಿಗೆ ಬರುವ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ- ಉಪಹಾರದ ವ್ಯವಸ್ಥೆ ಗಳನ್ನು ರೂಪಿಸಲು ಕ್ಯಾಂಟೀನ್‌ಗಳನ್ನು ಆರಂಭಿಸುವ ಚಿಂತನೆ ಇದೆ ಎಂದು ಎಪಿಎಂಪಿ, ಜವಳಿ, ಕಬ್ಬು ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು, ಬಳ್ಳಾರಿಯಲ್ಲಿ ಅಲ್ಲಿನ ವರ್ತಕರೇ ರಿಯಾಯಿತಿ ದರದಲ್ಲಿ ರೈತರಿಗೆ ಊಟ ಒದಗಿಸುತ್ತಿದ್ದಾರೆ. ರೈತ ಆಸ್ಪತ್ರೆ, ರೈತ ಭವನವನ್ನು ಪ್ರಾರಂಭಿಸಿದ್ದಾರೆ. ಇದನ್ನು ರಾಜ್ಯದ ಎಲ್ಲೆಡೆ ವಿಸ್ತರಿಸಿ ರೈತರಿಗೆ ಕಡಿಮೆ ದರದಲ್ಲಿ ಊಟ ಒದಗಿಸುವ ಚಿಂತನೆ ಇದೆ ಎಂದು ಹೇಳಿದರು.