ಕರ್ನಾಟಕ ಬಿಜೆಪಿಯಲ್ಲಿ ನೂತನ ವಕ್ತಾರರ ತಂಡವನ್ನು ನೇಮಕ ಮಾಡಲಾಗಿದೆ. ಹಿರಿಯ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಅವರನ್ನು ರಾಜ್ಯ ವಕ್ತಾರರನ್ನಾಗಿ ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪಕ್ಷ ಸಂಘಟನಾ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಈಚೆಗಷ್ಟೇ ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದ ಅವರು ಈಗ ಪಕ್ಷದ ಮುಖ್ಯ ವಕ್ತಾರರು ಹಾಗೂ ವಕ್ತಾರರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಇದರ ಜತೆಗೆ ಸಾಮಾಜಿಕ ಜಾಲತಾಣ ಸಂಚಾಲಕರು, ಸಹ-ಸಂಚಾಲಕರು, ಮಾಹಿತಿ ತಂತ್ರಜ್ಞಾನ ವಿಭಾಗದ (ಐಟಿ) ಸಂಚಾಲಕರು, ಸಹ-ಸಂಚಾಲಕರು ಮತ್ತು ಮಾಧ್ಯಮ ವಿಭಾಗ ಸಂಚಾಲಕರನ್ನು ಸಹ ನಿಯುಕ್ತಿಗೊಳಿಸಿದ್ದಾರೆ. ಹಿರಿಯ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ರಾಜ್ಯ ಬಿಜೆಪಿ ವಕ್ತಾರರಾಗಿ ನೇಮಕಗೊಂಡಿದ್ದಾರೆ.

ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥನಾರಾಯಣ ಅವರನ್ನು ಮುಖ್ಯ ವಕ್ತಾರರನ್ನಾಗಿ ನೇಮಕ ಮಾಡಲಾಗಿದ್ದರೆ, ಹಿರಿಯ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಸೇರಿ 10 ಮಂದಿಯನ್ನು ವಕ್ತಾರರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಮುಖ್ಯ ವಕ್ತಾರರು: ಅಶ್ವತ್ಥನಾರಾಯಣ, ವಿಧಾನ ಪರಿಷತ್‌ ಮಾಜಿ ಸದಸ್ಯರು

ವಕ್ತಾರರು: ಹರಿಪ್ರಕಾಶ್‌ ಕೋಣೆಮನೆ, ಛಲವಾದಿ ನಾರಾಯಣಸ್ವಾಮಿ, ಡಾ. ತೇಜಸ್ವಿನಿ ಗೌಡ, ಕೆ.ಎಸ್.‌ ನವೀನ್‌, ಎಂ.ಜಿ. ಮಹೇಶ್‌, ಎಚ್.ಎನ್.‌ ಚಂದ್ರಶೇಖರ್‌, ಡಾ. ನರೇಂದ್ರ ರಂಗಪ್ಪ, ಕು. ಸುರಭಿ ಹೊದಿಗೆರೆ, ಅಶೋಕ್‌ ಕೆ.ಎಂ. ಗೌಡ, ಎಚ್.‌ ವೆಂಕಟೇಶ್‌ ದೊಡ್ಡೇರಿ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಐಟಿ, ಸೋಷಿಯಲ್‌ ಮೀಡಿಯಾ ಸೆಲ್‌ಗೆ ಆಯ್ಕೆ
ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕರು, ಸಹ-ಸಂಚಾಲಕರು, ಮಾಹಿತಿ ತಂತ್ರಜ್ಞಾನ ವಿಭಾಗದ (ಐಟಿ) ಸಂಚಾಲಕರು, ಸಹ-ಸಂಚಾಲಕರು ಮತ್ತು ಮಾಧ್ಯಮ ವಿಭಾಗ ಸಂಚಾಲಕರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಸಾಮಾಜಿಕ ಜಾಲತಾಣ
ಸಂಚಾಲಕರು: ಪ್ರಶಾಂತ್‌ ಮಾಕನೂರು

ಸಹ ಸಂಚಾಲಕರು: ನರೇಂದ್ರ ಮೂರ್ತಿ

ಮಾಹಿತಿ ತಂತ್ರಜ್ಞಾನ ವಿಭಾಗ (ಐಟಿ)
ಸಂಚಾಲಕರು: ನಿತಿನ್‌ರಾಜ್‌ ನಾಯಕ್

ಸಹ ಸಂಚಾಲಕರು: ಶ್ಯಾಮಲಾ ರಘುನಂದನ್‌

ಮಾಧ್ಯಮ ವಿಭಾಗ (ಐಟಿ)
ಸಂಚಾಲಕರು: ಕರುಣಾಕರ ಖಾಸಲೆ

ಸಹ ಸಂಚಾಲಕರು: ಪ್ರಶಾಂತ್‌ ಕೆಡಂಜಿ