ದೆಹಲಿ : ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿದೆ. 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಇನ್ನೂ ಉಳಿದಿರುವ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ.

ಉಡುಪಿ-ಚಿಕ್ಕಮಗಳೂರಿನಲ್ಲಿ ಅನುಭವಿ ರಾಜಕಾರಣಿ ಹಾಗೂ ಖ್ಯಾತ ನ್ಯಾಯವಾದಿ ಜಯಪ್ರಕಾಶ ಹೆಗ್ಡೆ ಅವರಿಗೆ ಮತ್ತೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿದೆ. ಮಂಗಳೂರಿನಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಅತ್ಯಾಪ್ತ ಪದ್ಮರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ.

ಬೆಳಗಾವಿಯಲ್ಲಿ ರಾಜ್ಯದ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುಪುತ್ರ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಚಿಕ್ಕೋಡಿಯಲ್ಲಿ ರಾಜ್ಯದ ಇನ್ನೊಬ್ಬ ಪ್ರಭಾವಿ ಸಚಿವ ಸತೀಶ ಜಾರಕಿಹೊಳಿಯವರ ಸುಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವುದು ವಿಶೇಷವಾಗಿದೆ. ಇಬ್ಬರು ತಮ್ಮ ಮಕ್ಕಳಿಗೆ ಟಿಕೆಟ್ ಗಿಟ್ಟಿಸಿಕೊಂಡು ಮಕ್ಕಳ ರಾಜಕೀಯ ಭವಿಷ್ಯವನ್ನು ಸಾಕಾರಗೊಳಿಸುತ್ತಿದ್ದಾರೆ. ಇದೀಗ ಟಿಕೆಟ್ ಅಧಿಕೃತವಾಗಿ ಘೋಷಣೆ ಅಷ್ಟೇ ಬಾಕಿ ಉಳಿದಿದ್ದು ಇಬ್ಬರು ಜನನಾಯಕರು ಜಿಲ್ಲೆಯಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿರುವುದು ಗಮನ ಸೆಳೆದಿದೆ.

ಬಾಕಿ ಉಳಿದಿರುವುದು
-ಬೆಂಗಳೂರು ಉತ್ತರ
-ಉತ್ತರ ಕನ್ನಡ
-ಹುಬ್ಬಳ್ಳಿ-ಧಾರವಾಡ
-ಬಳ್ಳಾರಿ

ಸಂಭವನೀಯ ಅಭ್ಯರ್ಥಿಗಳು
ಬೆಳಗಾವಿ: ಮೃಣಾಲ್‌ ಹೆಬ್ಬಾಳ್ಕರ್‌
ಚಿಕ್ಕೋಡಿ: ಪ್ರಿಯಾಂಕಾ ಜಾರಕಿಹೊಳಿ
ದಕ್ಷಿಣ ಕನ್ನಡ: ಪದ್ಮರಾಜ್‌
ಉಡುಪಿ- ಚಿಕ್ಕಮಗಳೂರು: ಜಯಪ್ರಕಾಶ್‌ ಹೆಗ್ಡೆ
ಕಲಬುರಗಿ: ರಾಧಾಕೃಷ್ಣ ದೊಡ್ಡಮನಿ
ಬೀದರ್‌: ರಾಜಶೇಖರ ಪಾಟೀಲ್‌ ಹುಮ್ನಾಬಾದ್‌
ರಾಯಚೂರು: ಕುಮಾರ ನಾಯಕ್‌
ಕೊಪ್ಪಳ: ರಾಜಶೇಖರ ಹಿಟ್ನಾಳ
ಬೆಂಗಳೂರು ದಕ್ಷಿಣ: ಸೌಮ್ಯಾ ರೆಡ್ಡಿ
ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ
ಬೆಂಗಳೂರು ಕೇಂದ್ರ: ನಜೀರ್‌ ಅಹ್ಮದ್‌/
ಮನ್ಸೂರ್‌ ಅಲಿಖಾನ್‌
ಕೋಲಾರ: ಡಾ| ಎಲ್‌. ಹನುಮಂತಯ್ಯ
ಚಿತ್ರದುರ್ಗ: ಬಿ.ಎನ್‌. ಚಂದ್ರಪ್ಪ
ದಾವಣಗೆರೆ: ಡಾ.ಪ್ರಭಾ ಮಲ್ಲಿಕಾರ್ಜುನ
ಚಾಮರಾಜನಗರ: ಸುನಿಲ್‌ ಬೋಸ್‌
ಮೈಸೂರು: ಎಂ. ಲಕ್ಷ್ಮಣ
ಬಾಗಲಕೋಟೆ: ಸಂಯುಕ್ತ ಶಿವಾನಂದ ಪಾಟೀಲ/ಅಜಯಕುಮಾರ ಸರನಾಯಕ್‌