ಬೆಳಗಾವಿ :
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಸೋಮವಾರ ನಡೆದಿದೆ. ಬೆಳಗಾವಿಯ ವಿವಿಧ ಆಸ್ಪತ್ರೆಗಳಲ್ಲಿ ಅಂದು ಜನಿಸಿದ ಮಕ್ಕಳು ಎಷ್ಟು ಗೊತ್ತೇ ? ಬೆಳಗಾವಿ ನಗರ ಸೇರಿ ಜಿಲ್ಲೆಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಸೋಮವಾರ ಸಂಜೆ ಐದು ಗಂಟೆವರೆಗೆ ಒಟ್ಟು 145 ಮಕ್ಕಳು ಜನಿಸಿದ್ದು ಇದರಲ್ಲಿ 65 ಹೆಣ್ಣು ಶಿಶುಗಳ ಜನನವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 95 ಹೆರಿಗೆಗಳು ನಡೆದಿವೆ. ರಾಮ ಮಂದಿರ ಪ್ರತಿಷ್ಠಾಪನೆ ದಿನದಂದೇ ಗರ್ಭಿಣಿಯರು ತಮ್ಮ ಹೆರಿಗೆಗೆ ತವಕಿಸಿದ್ದು ಎಲ್ಲೆಡೆ ವಿಶೇಷ. ಅಂದು ಜನಿಸಿದ ಮಕ್ಕಳಿಗೆ ರಾಮ ಮತ್ತು ಸೀತೆ ಎಂದು ನಾಮಕರಣ ಮಾಡಿರುವುದು ಗಮನ ಸೆಳೆದಿದೆ. ಗೃಹಪ್ರವೇಶ, ಅಂಗಡಿ ಮುಂಗಟ್ಟು, ವಾಹನಗಳ ಖರೀದಿ ಸೇರಿದಂತೆ ಪ್ರತಿಯೊಂದಕ್ಕೂ ರಾಮ ಮಂದಿರದ ಪ್ರತಿಷ್ಠಾಪನೆ ದಿನವನ್ನೇ ಆಯ್ಕೆ ಮಾಡಿಕೊಂಡಿರುವುದು ಈ ಸಲ ವಿಶೇಷವಾಗಿ ಕಂಡುಬಂದಿದೆ.