ಬೆಳಗಾವಿ :
ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆದ 10 ದಿನಗಳ ಅಧಿವೇಶನಕ್ಕೆ ಈ ವರ್ಷ ಬರೋಬ್ಬರಿ ₹40 ಕೋಟಿ ವೆಚ್ಚವಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿದೆ.

17 ಮಸೂದೆಗಳ ಮಂಡನೆ, ಡಿಸಿಎಂ ಡಿಕೆಶಿ ವಿರುದ್ಧದ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್, ಭ್ರೂಣಹತ್ಯೆ, ಮಹಿಳೆ ಬೆತ್ತಲೆಗೊಳಿಸಿ ಥಳಿತ ಹಾಗೂ ಉತ್ತರ ಕರ್ನಾಟಕ ಸಮಸ್ಯೆ ಸೇರಿ ಕೆಲವೇ ಚರ್ಚೆಗಳಿಗೆ ಸೀಮಿತಗೊಂಡು ಸದನ ಮುಕ್ತಾಯಗೊಂಡಿದೆ.

ಆದರೆ, ಇಷ್ಟೊಂದು ದೊಡ್ಡ ಪ್ರಮಾಣದ ಹಣ ಖರ್ಚಾಗುವುದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆ. ಈ ನಿಟ್ಟಿನಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು. ಅಂದಾಗ ಮಾತ್ರ ಬೆಳಗಾವಿ ಅಧಿವೇಶನದ ನೈಜ ಉದ್ದೇಶ ಈಡೇರಿಕೆ ಸಾಧ್ಯವಾಗುತ್ತದೆ.