ಬೆಳಗಾವಿ :
ಬೆಳಗಾವಿಯ ಸುವರ್ಣವಿಧಾನಸೌಧಲ್ಲಿ ನಡೆಯುವ ಅಧಿವೇಶನದ ಪ್ರಯುಕ್ತ ಎಲ್ಲ ಶಾಸಕರ ವಾಸ್ತವ್ಯಕ್ಕಾಗಿ ನೂತನವಾಗಿ ಶಾಸಕರ ಭವನ ನಿರ್ಮಾಣ ಮಾಡಲು ಬದ್ಧರಾಗಿದ್ದೇವೆ ಎಂದು ಸ್ಪೀಕರ್ ಯು.ಟಿ. ಖಾದ‌ರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿ, ಅಧಿವೇಶನಕ್ಕೆ ಬಂದ ನಂತರ ಅವರಿಗೆ ವಾಸ್ತವ್ಯ ಹೂಡಲು ಸುವರ್ಣ ಸೌಧದ ಆವರಣದಲ್ಲೇ ಭವನವನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುವುದು ಎಂದಿದ್ದಾರೆ. ಇದನ್ನು ಅಧಿವೇಶನ ಇಲ್ಲದಿದ್ದಾಗ ಖಾಸಗಿಯವರಿಗೂ ಬಾಡಿಗೆಗಾಗಿ ಕೊಡಬಹುದು ಎಂದು ಅವರು ತಿಳಿಸಿದ್ದಾರೆ.