ಬೆಳಗಾವಿ : ಲೋಕಾಪುರದಿಂದ ರಾಮದುರ್ಗ-ಸವದತ್ತಿ ಮೂಲಕ ಧಾರವಾಡಕ್ಕೆ ಸೇರುವ ಹೊಸ ರೈಲು ಮಾರ್ಗದ ಸಮೀಕ್ಷೆಗೆ ಈಗ ಪಕ್ಷಬೇಧ ಮರೆತು ವೇದಿಕೆ ಸಜ್ಜಾಗಿದೆ.
ರಾಮದುರ್ಗದಲ್ಲಿ ರೈಲು ಹೋರಾಟ ಕ್ರಿಯಾ ಸಮಿತಿ ಪ್ರವಾಸಿ ಮಂದಿರದ ಆವರಣದಲ್ಲಿ ನಡೆಸಿದ ಸಭೆ, ಉದ್ದೇಶಿಸಿ ಅವರು ಮಾತನಾಡಿದರು.
ರಾಮದುರ್ಗ ಶಾಸಕ ಮತ್ತು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಈ ಬಗ್ಗೆ ಮಾತನಾಡಿ, ಡಿಸೆಂಬರ್ ಕೊನೆಯ ವಾರದಲ್ಲಿ ದೆಹಲಿಗೆ ಹೋಗಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಲೋಕಾಪುರ-ರಾಮದುರ್ಗ- ಸವದತ್ತಿ ಮೂಲಕ ಧಾರವಾಡಕ್ಕೆ ಸೇರುವ ಹೊಸ ರೈಲು ಮಾರ್ಗದ ಸಮೀಕ್ಷೆಗೆ ಮುಖಂಡರ ನಿಯೋಗ ತೆಗೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾರೆ.
ಪಕ್ಷಾತೀತ ಹಾಗೂ ಜಾತ್ಯಾತೀತ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ತಿಳಿಸಿದರು. ಬೆಳಗಾವಿಯಲ್ಲಿ ಡಿಸೆಂಬರ್ 9 ರಿಂದ 20ರವರೆಗೆ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ನಡೆಯಲಿದೆ. ಅಧಿವೇಶನ ಮುಗಿದ ತಕ್ಷಣ ಕ್ರಿಯಾ ಸಮಿತಿ ಸದಸ್ಯರನ್ನು ಒಳಗೊಂಡು ರಾಮದುರ್ಗದ ವಿವಿಧ ಪಕ್ಷಗಳ ಮುಖಂಡರ ಜೊತೆ ದೆಹಲಿಗೆ ಹೋಗಿ ಕೇಂದ್ರ ರೈಲು ಸಚಿವರನ್ನು ಭೇಟಿ ಮಾಡಿ ಸಮೀಕ್ಷೆಗೆ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ರೈಲು ಹೋರಾಟ ಕ್ರಿಯಾ ಸಮಿತಿ ನಾಯಕರಾದ ಗೈಬು ಜೈನೇಖಾನ್ , ಮಹಮದ್ ಶಫಿ ಬೆಣ್ಣಿ, ಬಿ.ಆರ್. ದೊಡ್ಡಮನಿ, ಬಸೀರ್ ಅಹಮದ್ ಬೈರಕದಾರ್, ಮಲ್ಲಿಕಾರ್ಜುನ ರಾಮದುರ್ಗ,ಎಸ್.ಜಿ.ಚಿಕ್ಕನರಗುಂದ ಅವರು ರಾಮದುರ್ಗಕ್ಕೆ ರೈಲು ಬರಬೇಕು ಎನ್ನುವುದು ಇಂದು ನಿನ್ನೆಯ ಬೇಡಿಕೆಯಲ್ಲ. ಹೋರಾಟ ಮಾಡಿ ರಾಮದುರ್ಗಕ್ಕೆ ರೈಲು ಮಾರ್ಗ ಬರುವಂತೆ ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಿದರು.