ಬೆಂಗಳೂರು : ರಾಜ್ಯ ಆರೋಗ್ಯ ಇಲಾಖೆ ಇದೀಗ ಗರ್ಭಿಣಿಯರಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ಅಲ್ಟ್ರಾ ಸೌಂಡ್ ಕೊಠಡಿಯಲ್ಲಿ ಗರ್ಭಿಣಿಯನ್ನು ಪರೀಕ್ಷೆ ಮಾಡುವಾಗ ಪತಿ ಸಹಿತ ಇತರ ಸಂಬಂಧಿಕರಿಗೆ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಇತ್ತೀಚಿಗೆ ಈ ಆದೇಶ ಹೊರಡಿಸಿದ್ದು ಗರ್ಭಿಣಿಯರ ಜೊತೆಗೆ ಅಲ್ಟ್ರಾ ಸೌಂಡ್ ಕೊಠಡಿಗೆ ಬರುವ ಸಂಬಂಧಿಕರು ಅಲ್ಟ್ರಾ ಸೌಂಡ್ ಕಾರ್ಯವಿಧಾನ ಮತ್ತು ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ಹೊರಡಿಸಿದೆ. ಈ ಬಗ್ಗೆ ಕೊಠಡಿಯ ಹೊರಗಡೆ ಕಡ್ಡಾಯವಾಗಿ ಫಲಕ ಹಾಕಬೇಕು ಎಂದು ಸ್ಕ್ಯಾನಿಂಗ್ ಸೆಂಟರ್ ಗೆ ಸೂಚನೆ ನೀಡಲಾಗಿದೆ.