ಧರ್ಮಶಾಲಾ : ಇಂಗ್ಲೆಂಡ್ ವಿರುದ್ಧದ ಗೆಲುವಿನೊಂದಿಗೆ ಭಾರತ ಟೆಸ್ಟ್ ವಿಶ್ವ ಚಾಂಪಿಯನ್ಶಿಪ್ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರ ಪಡಿಸಿಕೊಂಡಿದೆ.
ಸದ್ಯ ಭಾರತ 9 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ ಶೇ.68.51 ಗೆಲುವಿನ ಪ್ರತಿಶತ ಹೊಂದಿದೆ. ನ್ಯೂಜಿಲೆಂಡ್ 5ರಲ್ಲಿ 3 ಗೆಲುವಿನೊಂದಿಗೆ ಶೇ.60 ಗೆಲುವಿನ ಪ್ರತಿಶತದೊಂದಿಗೆ 2ನೇ, ಆಸ್ಟ್ರೇಲಿಯಾ 11 ಪಂದ್ಯಗಳಲ್ಲಿ 7 ಜಯ ದೊಂದಿಗೆ ಶೇ.59.09 ಗೆಲುವಿನ ಪ್ರತಿಶತ ದೊಂದಿಗೆ 3ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ವಿರುದ್ದ2ನೇ ಪಂದ್ಯದಲ್ಲಿಗೆದ್ದರೆ ಆಸೀಸ್ 2ನೇ ಸ್ಥಾನಕ್ಕೇರಲಿದೆ. ಅತ್ತ ಇಂಗ್ಲೆಂಡ್ ಕೇವಲ ಶೇ.17.5 ಜಯದ ಪ್ರತಿಶತದೊಂದಿಗೆ 8ನೇ ಸ್ಥಾನದಲ್ಲೇ ಮುಂದುವರಿಸಿದೆ. ಇಂಗ್ಲೆಂಡ್ ಆಡಿರುವ 10 ಪಂದ್ಯ ದಲ್ಲಿ 6ರಲ್ಲಿ ಸೋತಿದೆ.