ಟೋಕಿಯೊ: ಜಪಾನ್‌ನ ಮಾಜಿ ರಕ್ಷಣಾ ಸಚಿವ ಶಿಗೆರು ಇಶಿಖಾ ಅವರು ದೇಶದ ಮುಂದಿನ ಪ್ರಧಾನಿಯಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ.

ಪ್ರೋಮಿಯೊ ಕಿಂಡಾ ಅವರ ಉತ್ತರಾಧಿಕಾರಿಯಾಗಲು ಒಂಬತ್ತು ಅಭ್ಯರ್ಥಿಗಳ ನಡುವೆ ನಡೆದ ಪೈಪೋಟಿಯಲ್ಲಿ ಶಿಗರು ಗೆಲುವು ಸಾಧಿಸಿದ್ದಾರೆ. ಅ.1ರಂದು ಇಶಿಬಾ ಜಪಾನ್ ನ 102 ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಈಗಾಗಲೇ ಹುದ್ದೆ ತೊರೆಯುವುದಾಗಿ ಘೋಷಿಸಿರುವ ಹಾಲಿ ಪ್ರಧಾನಿ ಹಿಡಾ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

ಜಪಾನ್ ಆಡಳಿತಾರೂಢ ‘ಲಿಬರಲ್ ಡೆಮಾಕ್ರಟಿಕ್ ಪಾರ್ಟಿ’ (ಎಲ್‌ಡಿಪಿ) ನಾಯಕನ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಈ ವೇಳೆ ಜಪಾನ್ ಮೊದಲ ಮಹಿಳಾ ಪ್ರಧಾನಿಯಾಗಲು ಕಣಕ್ಕಿಳಿದಿದ್ದ ಸಚಿವೆ ಸಾನೆ ತಕ್ಷೆಚಿ ಸೇರಿದಂತೆ 8 ಮಂದಿಯನ್ನು ಮಣಿಸಿ ಇಶಿಬಾ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ನಾನು ಜನರನ್ನು ನಂಬುತ್ತೇನೆ. ಧೈರ್ಯ ಮತ್ತು ಪ್ರಾಮಾಣಿಕತೆಯಿಂದ ಕೆಲಸದ ಮೂಲಕ ಮಾತನಾಡುತ್ತೇನೆ. ದೇಶವನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು ನಾನು ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಇಶಿಯಾ ಹೇಳಿದ್ದಾರೆ.

ಸಂಸತ್ತಿನ ಅನುಮೋದನೆಯ ನಂತರ, ಹೊಸ ಪ್ರಧಾನಿ ನೂತನ ಸಚಿವ ಸಂಪುಟವನ್ನು ರಚನೆ ಮಾಡಲಿದ್ದಾರೆ. ಜಪಾನ್ ಕೆಳಮನೆಯ ಪ್ರಸ್ತುತ ಅಧಿಕಾರಾವಧಿ ಅಕ್ಟೋಬರ್ 2025 ರವರೆಗೆ ಇರಲಿದ್ದು, ಇನ್ನೊಂದು ವರ್ಷದೊಳಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

‘ಎಲ್ ಡಿಪಿ’ಯ ಜನಪ್ರಿಯ ನಾಯಕರಾಗಿದ್ದ ದಿವಂಗತ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು 2022ರ ಜುಲೈ 28 ರಂದು ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದ.