ಬೆಳಗಾವಿ: ನಾನು ಲೋಕಸಭೆಗೆ ಆಯ್ಕೆಯಾದ ಬಳಿಕ ಬೆಳಗಾವಿಯನ್ನು ಮಾದರಿ ನಗರ ಮಾಡುವ ಗುರಿ ಹೊಂದಿದ್ದೇನೆ. ಬೆಳಗಾವಿ ನಗರವನ್ನು ಮೆಟ್ರೋ ನಗರ ಮಾಡಬೇಕು. ಬೆಳಗಾವಿ ಅಭಿವೃದ್ಧಿಗಾಗಿ ಹಿಂದೆ ಕೂಡಾ ಶ್ರಮಿಸಿದ್ದೇನೆ. ಹಾಗಾಗಿ ಪ್ರಮಾಣದ ಮಾಡಿ ಹೇಳುವೆ, ಬೆಂಗಳೂರು ಬಿಟ್ಟು ಬೆಳಗಾವಿಯನ್ನು ಸೆಂಟರ್ ಸ್ಥಳವನ್ನಾಗಿ ಮಾಡುವ ಗುರಿ ಇದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.

ಲೋಕಸಭಾ ಚುನಾವಣೆಯ ಅಂಗವಾಗಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಹು ನಗರದಲ್ಲಿ ಬಹಿರಂಗ ಸಭೆ ನಡೆಸಿ ಮತಯಾಚನೆ ಮಾಡಿ, ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಉತ್ತಮ ಸ್ಪಂದನ ನೀಡುತ್ತಿದ್ದಾರೆ. ಹಾಗಾಗಿ ಬ್ಯಾಲೆಟ್ ಪೆಪರ್ ನಲ್ಲಿ ಎರಡನೆ ನಂಬರ್ ಗೆ ಮತ ನೀಡಿ, ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು‌.

ದಿ. ಸುರೇಶ್ ಅಂಗಡಿಯವರು ಅವರು ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ದಿ.‌ಸುರೇಶ್ ಅಂಗಡಿ ಅವರು ಅಂದುಕೊಂಡಿದ್ದ ಅನೇಕ ಕೆಲಸಗಳು ಮಾಡುವುದು ಬಾಕಿ ಇದೆ. ಹಾಗಾಗಿ ಬಿಜೆಪಿ ಚಿನ್ಹೆಗೆ ಮತ ನೀಡಿ ಗೆಲ್ಲಿಸಬೇಕು ಎಂದು ಜಗದೀಶ್ ಶೆಟ್ಟರ್ ಅವರು ಕರೆ ನೀಡಿದರು.

ಬಿಜೆಪಿ ರಾಜ್ಯ ಉಪಾದ್ಯಕ್ಷ ಅನೀಲ ಬೆನಕೆ ಅವರು ಮಾತನಾಡಿ, ಜಗದೀಶ್ ಶೆಟ್ಟರ್ ಅವರಿಗೆ ರಾಜಕೀಯ ಹಾಗೂ ಆಡಳಿತದ ಅನುಭವ ಹೆಚ್ಚು ಇದೆ. ಅಂತಹ ವ್ಯಕ್ತಿಗೆ ಮತ ನೀಡಬೇಕು‌ ಯಾವುದೇ ಪರಿಸ್ಥಿತಿ ಇದ್ದರು ಮೋದಿಯವರು ಮತ್ತೆ ಪ್ರಧಾನಿ ಆಗಬೇಕು‌. ಹಾಗಾಗಿ ಜಗದೀಶ್ ಶೆಟ್ಟರ್ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.‌

ದೇಶದಲ್ಲಿ 500 ವರ್ಷದಲ್ಲಿ ರಾಮ ಮಂದಿರ ಆಗಲಿಲ್ಲ‌.‌ ರಾಮ ಮಂದಿರ ಆಗಬಾರದು ಎಂದು ಕಾಂಗ್ರೆಸ್ ಕುತಂತ್ರ ಮಾಡಿತು.‌ ಆದರೆ ಮೋದಿ ಆಡಳಿತದಲ್ಲಿ ರಾಮ ಮಂದಿರ ನಿರ್ಮಾಣ ಮಾಡಿ ಉದ್ಘಾಟನೆ ಕೂಡಾ ಮಾಡಿದರು. ಒಂದು ಕಡೆ ದೇಶ ಮತ್ತು ಧರ್ಮಕ್ಕಾ ಹೋರಾಟ ಮಾಡುವ ಪ್ರಧಾನಿ ಆದರೆ ಇನ್ನೊಂದು ಕಡೆ ಪಾಕಿಸ್ಥಾನ ಜೈ ಎನ್ನುವ ಪಕ್ಷ ಒಂದು ಕಡೆ ಇದೆ. ಮುಂದೆ ದೇಶದಲ್ಲಿ ಅನೇಕ ಬದಲಾವಣೆ ಆಗುತ್ತದೆ. ದೇಶ ವಿಶ್ವಗುರು ಆಗುತ್ತದೆ ಹಾಗಿ ಜಗದೀಶ್ ಶೆಟ್ಟರ್ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಅನಿಲ ಬೆನಕೆ ಅವರು ಕರೆ ನೀಡಿದರು.

ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ. ಮಂಡಳ ಅಧ್ಯಕ್ಷ ವಿಜಯ ಕೊಡಗನವರ್, ಪಾಲಿಕೆ ಸದಸ್ಯ ಶ್ರೇಯಸ್ ನಾಕಾಡಿ, ಮಾಜಿ ಉಪ ಮೇಯರ್ ರೇಶ್ಮಾ ಪಾಟೀಲ್, ಯುವ ಮುಖಂಡ ಸಂಕಲ್ಪ ಶೆಟ್ಟರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.‌