ಬೆಳಗಾವಿ: ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ರಚನೆ ಆಗಲಿದೆ.‌ ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆ ಆದರೆ ಜಗದೀಶ್ ಶೆಟ್ಟರ್ ಅವರಿಗೆ ಉನ್ನತ ಸ್ಥಾನ ಸಿಗಲಿದೆ. ಆಗ ನಾವು ಕೇಂದ್ರದ ಅನೇಕ ಯೋಜನೆಗಳು ಹಾಗೂ ಅನೇಕ ಮಹತ್ವದ ಕೇಲಸಗಳು ನಮ್ಮ ಕ್ಷೇತ್ರಕ್ಕಾಗಿ ಮಾಡಬಹುದು. ಹಾಗಾಗಿ ಜಗದೀಶ ಶೆಟ್ಡರ್ ಅವರನ್ನು ದೆಹಲಿಗೆ ಕಳುಹಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕೊಹೊಳಿ ಅವರು ಕರೆ ನೀಡಿದ್ದಾರೆ.‌

ಲೋಕಸಭಾ ಚುನಾವಣೆಯ ಅಂಗವಾಗಿ ಮೂಡಲಗಿ ಮತಕ್ಷೇತ್ರದ ಮೇಳವಂಕಿ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿ, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು,
ಕಾಂಗ್ರೆಸ್ ಪಕ್ಷದವರು ಎನೆ ಹೇಳಿದರು. ನೀವು ಬಿಜೆಪಿಗೆ ಮತ ನೀಡಿಬೇಕು. ಬರಗಾಲದ ಸಂದರ್ಭದಲ್ಲೂ ನಮ್ಮ ಕ್ಷೇತ್ರದಲ್ಲಿ ಹೊಳೆ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗಿದೆ. ಮುಂದಿನ 10 ದಿನಗಳು ಹೊಳೆ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗುವುದು. ಬೇರೆ ಬೇರೆ ಅಭಿವೃಧ್ಧಿ ಕೆಲಸಗಳು ಸಾಕಷ್ಟು ಆಗಿದೆ. ಮುಂದೆ ಕೂಡಾ ಹೆಚ್ಚಿನ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.‌

ನಮ್ಮ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನರು ಅನನ್ಯವಾಗಿ ಇದ್ದೇವೆ. ಬಸವಣ್ಣನವರು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟದಂತೆ ನಮ್ಮ ಕ್ಷೇತ್ರದಲ್ಲಿ ಎಲ್ಲರೂ ಇರುತ್ತಿದ್ದೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಬಿಜೆಪಿ ಅಭ್ಯರ್ಥಿ ಜಗದೀಶ್ವ ಶೆಟ್ಟರ್ ಅವರು ಮಾತನಾಡಿ, ಬಿಸಿಲು ಸಾಕಷ್ಟು ಇದ್ದರು ಸಾವಿರಾರು ಜನ ಸೇರಿ ನಮಗೆ ಬೆಂಬಲ ನೀಡಿದ್ದು ನಮಗೆ ಮತ್ತು ಬಾಲಚಂದ್ರ ಜಾರಕಿಹೊಳಿವರಿಗೆ ಹೆಚ್ಚು ಶಕ್ತಿ ಸಿಕ್ಕಂತಾಗಿದೆ.‌ ಪ್ರಧಾನಿ ನರೇಂದ್ರ ಮೋದಿಯವರು ಕೆಳದ 10 ವರ್ಷದಿಂದ ಉತ್ತಮ ಆಡಳಿತ ನೀಡಿದ್ದಾರೆ.‌ ಹಾಗಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕು. ಜಗತ್ತಿನಲ್ಲಿ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ. 14 ನೇ ಸ್ಥಾನದಲ್ಲಿ ಇದ್ದ , ದೇಶದ ಆರ್ಥಿಕತೆ 5 ಸ್ಥಾನದಲ್ಲಿದೆ.‌ ಇನ್ನೂ ಕೆಲವೇ ವರ್ಷಲದಲ್ಲಿ ಭಾರತ ಸೂಪರ್ ಪಾವರ್ ನಂಬರ್ ಒನ್ ದೇಶ ಆಗಲಿದೆ ಎಂದು ತಿಳಿಸಿದರು.

ಮೋದಿ ಆಡಳಿತದಲ್ಲಿ ಸಾಕಷ್ಟು ರಸ್ತೆಗಳು ಅಭಿದ್ಧಿ ಆಗಿದೆ. ಈ ಬಾರಿ ಎನ್ ಡಿ ಎ ಒಕ್ಕೂಟ 400 ಕ್ಕೂ ಸೀಟ್ ಗೆಲ್ಲುತ್ತದೆ. ನಮ್ಮ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಆದರೆ ಇಂಡಿಯಾ ಒಕ್ಕೂಟಕ್ಕೆ ಪ್ರಧಾನಿ ಅಭ್ಯರ್ಥಿ ಹೇಳಲು ಧೈರ್ಯ ಇಲ್ಲ. ಅವರಿಗೆ ಈ ಚುನಾವಣೆ ಎದುರಿಸಲು ನೈತಿಕಥೆ ಇಲ್ಲ. ಅಧಿಕಾರಕ್ಕೆ ಬರಲು ಸಾಧ್ಯನೆ ಇಲ್ಲದ ಕಾಂಗ್ರೆಸ್ ಜನಗರಿಗೆ ಸುಳ್ಳು ಭರವಸೆ ನೀಡುತ್ತಿದೆ. ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಗ್ಯಾರಂಟಿ ನಿಲ್ಲಲಿದೆ. ಹಾಗಾಗಿ ಮಹಿಳೆಯರು ಕಾಂಗ್ರೆಸ್ ದವರನ್ನು ನಂಬಬೇಡಿ‌. ಮೋದಿ ಆಡಳಿತದಲ್ಲಿ ಶಾಂತಿಯುತ ವಾತಾವರಣ ಭಾರತದಲ್ಲಿ ನೆಲೆಸಿದೆ.‌ ಜಗತ್ತಿನ ಅನೇಕ ದೇಶಗಳು ಆರ್ಥಿಕವಾಗಿ ಕುಸಿದಿದೆ. ಮೋದಿ ನಮ್ಮ ನಾಯಕ ಇರುವದರಿಂದ ನಮ್ಮ ದೇಶ ಆರ್ಥಿಕವಾಗಿ ಬೆಳೆದಿದೆ ಎಂದರು.‌

ಬಾಲಚಂದ್ರ ಜಾರಕಿಹೊಳಿ ಅವರ ನೇತೃದಲ್ಲಿ ಮೂಡಲಗಿ- ಅರಬಾವಿ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಆಗಿದೆ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರ ಮಾಡಿದ್ದಾರೆ. ನನಗೆ ರಾಜಕೀಯವಾಗಿ 30 ವರ್ಷಗಳ ಅನುಭವ ಇದೆ. ಹಾಗಾಗಿ ಯುವಕರಿಗೆ ಉದ್ಯೋಗ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಕೃಷಿಗೆ ಸಂಬಂಧಿಸಿದ ಅನೇಕ ಬಲದಲಾವಣೆ ಮಾಡೋಣ. ಎಲ್ಲೇ ನೋಡಿದರು ಬೆಳಗಾವಿ ಹೆಸರು ಬರಬೇಕು ಆ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವೆ ಎಂದರು.

ಮಹಾಂತೇಶ್ ಕವಟಗಿಮಠ್ ಮಾತನಾಡಿ, ಮಾ. ೭ ನಡೆಯುವ ಚುನಾವಣೆ ಐತಿಹಾಸಿಕ ಚುನಾವಣೆ, ದೇಶದ ನಾಯಕತ್ವ ನಿರ್ಧರಿಸುವ ಚುನಾವಣೆ ಆಗಿದೆ.‌ ಕಳೆದ ,೧೦ ವರ್ಷದಲ್ಲಿ ನರೇಂದ್ರ ಮೋದಿಯವರು ವಿವಿಧ ಜನಪರ ಯೋಜನೆಗಳುನ್ನು ನೀಡಿ, ನಾವು ಸ್ವಾಭಿಮಾನದಿಂದ ಬದಕಲು ಕೆಲಸ ಮಾಡಿದ್ದಾರೆ. ಕೋವಿಡ್ ಸಂದರ್ಧಲ್ಲಿ ಇಡಿ ವಿಶ್ವ ತತ್ತಿರಿಸಿತು.‌ ನಾವು ಒಟ್ಟಾಗಿ ಕೋವಿಡ್ ಎದುರಿಸಲು ಸಂಕಲ್ಪ ಮಾಡಿ, ಎಲ್ಲರಿಗೂ ಕೋವಿಡ್ ಲಸಿಕೆ ನೀಡಿದ್ದಾರೆ. ಬೆಳಗಾವಿಯ 8 ವಿಧಾನ ಸಭಾ ಕ್ಷೇತ್ರದಲ್ಲಿ ಮೂಡಲಗಿ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚು ಲೀಡ್ ನೀಡಬೇಕು‌. ಜಗದೀಶ್ ಶೆಟ್ಟರ್ ಆಯ್ಕೆ ಮಾಡುವ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರ ನಾಯಕತ್ವ ಕಟ್ಟಿಗೊಳಿಸಬೇಕು ಎಂದರು.‌

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಶುಭಾಸ ಪಾಟೀಲ್, ಮಂಡಳ ಅಧ್ಯಕ್ಷ ಮಹಾದೇವಪ್ಪ ಶೇಕಿ, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.‌