ಬೆಳಗಾವಿ: ಬೆಳಗಾವಿ ಉತ್ತರ ಹಾಗೂ ಗ್ರಾಮೀಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಶಾಸಕ ರಾಜು ಸೇಠ್ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರವಾಗಿ ಮತಯಾಚನೆ ಮಾಡಿದರು.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ತೆಂಗಿನಕೇರಿಗಲ್ಲಿ, ನೆಹರು ನಗರ ಹಾಗೂ ಅಶೋಕ ನಗರ, ಗಾಂಧಿನಗರದ ದೀಪಕ್ ಗಲ್ಲಿ, ದೀಪಕ್ ಕಾಲೋನಿಗಳಲ್ಲಿ ಪ್ರಚಾರ ಮಾಡಲಾಯಿತು. ಈ ವೇಳೆ ನಾಗರಿಕರಿಂದ ಅತ್ಯುತ್ತಮ ಬೆಂಬಲ ದೊರೆಯಿತು. ಈ ಬಾರಿ ಮೃಣಾಲ ಹೆಬ್ಬಾಳಕರ್ ಆಯ್ಕೆ ಖಚಿತ ಎಂದು ಜನರು ಅಭಯ ನೀಡಿದರು.

ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ರಾಜು ಅಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಎ.ಪಿ‌.ಎಂ.ಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ್, ಮುಖಂಡರಾದ ರಾಜಶೇಖರ ತಳವಾರ, ನಿಖಿಲ್ ರವೀಂದ್ರ ಮೂಲ್ಕೋಟೆ, ಅಮನ್ ಸೇಠ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಂಗ್ರಾಳಿ ಕೆ.ಎಚ್ ಗ್ರಾಮದಲ್ಲಿ ಸಚಿವರು ಪ್ರಚಾರ ನಡೆಸಿದರು. ಈ ಸಮಯದಲ್ಲಿ ಲತಾ ಪಾಟೀಲ, ಬಾಳಾರಾಮ ಪಾಟೀಲ, ಜ್ಯೋತಿ ಪಾಟೀಲ, ವೀಣಾ ಮುತಗೇಕರ, ಮನೋಹರ್ ಪಾಟೀಲ, ಸುಧೀರ ಪಾಟೀಲ, ಕೆಂಪಣ್ಣ ಎಸ್, ರಾಧಾ ಕಾಂಬಳೆ, ಮೋಹನ್ ಪಾಟೀಲ, ಆನಂದ ಭಜಂತ್ರಿ ಉಪಸ್ಥಿತರಿದ್ದರು.
ನಂತರ ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ ಮತಯಾಚನೆ ಮಾಡಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಕೌಸರಜಹಾನ್ ಸಯ್ಯದ್, ಜಯರಾಮ ಪಾಟೀಲ್, ದತ್ತಾ ಪಾಟೀಲ್, ಉಮೇಶ ಪಾಟೀಲ, ಶೀತಲ್ ಪಾಟೀಲ, ಸುವರ್ಣ ಲಕ್ಕಣ್ಣವರ, ಫಕೀರಪ್ಪ ಬೆಳಗಾವಿ, ಮೇನಕಾ ಕುರುಡೆ, ಶಕುಂತಲಾ ಸಿಂಗ್, ವೇದಿಕಾ ಪಠಾಣಿ, ಗಾಯತ್ರಿ ಪಾಟೀಲ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ನಂತರ, ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಹಾಪೂರದ‌ ಗಾಡೆ ಮಾರ್ಗ್ ಸಿದ್ದಾರ್ಥ ಕಾಲೋನಿಯ ಚಲವಾದಿ ಸಮಾಜ ಸೇವಾ ಕಮಿಟಿ ಹಾಲ್ ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಚಾರ ನಡೆಸಿದರು. ಈ ಸಮಯದಲ್ಲಿ ನಾಗರಾಜ ನಾಯಕ, ಸಾಗರ‌ ಹವಾಲ್ದಾರ್, ಸುನೀಲ್ ಬಸ್ತವಾಡೇಕರ್, ನಿಖಿಲ್ ಕೋಲಕಾರ್, ಯುವರಾಜ ತಳವಾರ, ಪ್ರಣಯ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.