ಬೆಳಗಾವಿ: ಬಾಲಚಂದ್ರ ಜಾರಕಿಹೊಳಿ ಅವರು ವಿಧಾನ ಸಭೆ ಚುನಾವಣೆಯಲ್ಲಿ ಪ್ರಚಾರದ ಮಾಡದೆ 70 ಸಾವಿರ ಲೀಡ್ ನಿಂದ ಗೆದ್ದಿದ್ದಾರೆ. ಆದರೆ ನಾನು ಪ್ರಚಾರಕ್ಕೆ ಬಂದಿದ್ದೇನೆ ಹಾಗಾಗಿ ನನಗೆ ನಿಮ್ಮ ಕ್ಷೇತ್ರದಿಂದ 80 ಸಾವಿರ ಲೀಡ್ ನೀಡಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು‌.

ಲೋಕಸಭಾ ಚುನಾವಣೆಯ ಅಂಗವಾಗಿ ಮೂಡಲಗಿ ಮತಕ್ಷೇತ್ರದ ಕೌಜಲಗಿ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿ ಮತಯಾಚನೆ ಮಾಡಿ ಮಾತನಾಡಿದ ಅವರು, ಕೆಲವೇ ವರ್ಷದಲ್ಲಿ ಚೈನಾ, ಅಮೇರಿಕಾ ದೇಶಗಳನ್ನು ಹಿಂದೆ ಹಾಕಿ ನಮ್ಮ ಭಾರತ ದೇಶ ಸೂಪರ್ ಪಾವರ್ ದೇಶ ಆಗಲಿದೆ. ಪ್ರಧಾನ ನರೇಂದ್ರ ಮೋದಿಯವರು ಪ್ರತಿ ಸೈನಿಕರಿಗೂ ಗೌರವ ಕೊಡುವ ಕೆಲಸ ಮಾಡಿದ್ದಾರೆ. ನಮ್ಮ ಸೈನಿಕರು 24 ಗಂಟೆನೂ ಕೆಲಸ ಮಾಡುತ್ತಾರೆ. ಪಾಕಿಸ್ತಾನದ ಸೈನಿಕರು ನಮ್ಮ ಮೇಲೆ ಗುಂಡು ಹಾಕಿದರೆ ಮೊದಲು ದೆಹಲಿ ಅನುಮತಿ ಪಡೆಯಬೇಕಿತ್ತು ಆದರೆ ಈಗ ಮೋದಿಯವರ ಆಡಳಿತದಲ್ಲಿ ಒಂದು ಗುಂಡು ಅವರು ಹಾಕಿದರೆ ನಮ್ಮ ಕಡೆಯಂದ 10 ಗುಂಡು ಹೊಡೆಯುವ ಮೂಲಕ ಉತ್ತರ ನೀಡಲು ಮೋದಿ ಅನುಮತಿ ನೀಡಿದ್ದಾರೆ‌ ಎಂದು ತಿಳಿಸಿದರು.‌

ನಮ್ಮ ಆರೋಗ್ಯ, ದೇಶದ ಭವಿಷ್ಯ ನರೇಂದ್ರ ಮೋದಿಯವರ ಕೈಯಲ್ಲಿ ಭದ್ರವಾಗಿದೆ. ಕಾಂಗ್ರೆಸ್ ನವರು ಗ್ಯಾರಂಟ ಬಿಟ್ಟರೆ ಬೇರೆ ಎನು ಮಾತಾಡುವದಿಲ್ಲ.‌ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಗ್ಯಾರಂಟ ನಿಲ್ಲಲಿದೆ ಎಂದು ತಿಳಿಸಿದರು.‌ ನನಗೆ 30 ವರ್ಷದ ರಾಜಕೀಯ ಅನುಭವ ಇದೆ. ಬೆಳಗಾವಿಯ ಜೊತೆ ವಿಶೇಷ ನಂಟು ಇದೆ. ಈ ಹಿಂದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಕ್ರಮ ಸಂಖೆ 2ಕ್ಕೆ ಮತ ನೀಡಿ ಹೆಚ್ಚಿನ ಲೀಡ ನಿಂದ ಗೆಲ್ಲಿಸಬೇಕು ಎಂದರು

*ಕಲ್ಮಡಿ ಏತ ನೀರವಾರಿ ಪ್ರಾರಂಭಕ್ಕೆ ಪ್ರಾಮಾಣಿಕ ಪ್ರಯತ್ನ: ಬಾಲಚಂದ್ರ ಜಾರಕಿಹೊಳಿ*

ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶ ಗಟ್ಟಿಯಾಗಿದೆ. ಮತ್ತೆ ದೇಶ ಹೆಚ್ಚು ಗಟ್ಟಿಯಾಗಬೇಕು ಎಂದರೆ ಬೆಳಗಾವಿಯಿಂದ ಜಗದೀಶ ಶೆಟ್ಟರ್ ಅವರು ಲೋಕಸಭೆಗೆ ಆಯ್ಕೆ ಮಾಡಬೇಕು. ಕಲ್ಮಡಿ ಏತ ನೀರವಾರಿ ಪ್ರಾರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ‌.‌ ಬರಲಾಗ ಇದ್ದರು ಕೇನಾಲಗೆ ನೀರು ಹರಿಸಲಾಗುತ್ತಿದೆ. ಚುನಾವಣೆ ಬಂದಾಗ ಕಾಂಗ್ರೆಸ್ ನವರು ಅಷ್ಟೆ ಬರುತ್ತಾರೆ. ಕಾಂಗ್ರೆಸ್ ನವರನ್ನು ನಂಬಬೇಡಿ. ನಿಮ್ಮ ಯಾವುದೆ ಕೆಲಸಗಳು ಇದ್ದರು ನಾವೆ ಮಾಡುತ್ತೇವೆ. ಹಾಗಾಗಿ ಜಜದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಿ ನಿಮ್ಮ ಅಭಿವೃದ್ಧಿ ಹಾಗೂ ಕ್ಷೇತ್ರದ ಅಭಿವೃದ್ದಿ ಮಾಡುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.‌

ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ್, ಮಂಡಳ ಅಧ್ಯಕ್ಷ ಮಹಾದೇವಪ್ಪ ಶೇಕಿ, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.‌