ಮೂಡಲಗಿ : ఇಲ್ಲಿయ ಮೂಡಲಗಿ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ಮಹತ್ವದ ಆದೇಶ ನೀಡಿದ್ದು, ಚೆಕ್ ಬೌನ್ಸ್ ಪ್ರಕರಣದ ಆರೋಪಿಗೆ ಜೈಲುಶಿಕ್ಷೆ ವಿಧಿಸಿದೆ.

ಪಿರ್ಯಾದಾರರಾದ ಮಹಾಲಕ್ಷ್ಮೀ ಅರ್ಬನ್ ಕೊ-ಆಫ್ ಕ್ರೆಡಿಟ್ ಸೊಸೈಟಿ ಲಿ.. ಮೂಡಲಗಿ ಇವರು ಆರೋಪಿಯಾದ ಮುಸ್ತಾಕ ಮೈಬೂಬಸಾಬ ಕುಡಚಿ ಸಾ॥ ಜಮಖಂಡಿ ಇವರು ಪಿರ್ಯಾದಿ ಸೊಸೈಟಿ ಜಮಖಂಡಿ ಶಾಖೆಯಲ್ಲಿ ಸಾಲ ಪಡೆದಿದ್ದು, ಸಾಲ ಮರುಪಾವತಿಗಾಗಿ ಚೆಕ್ ನ್ನು ನೀಡಿದ್ದು, ಆರೋಪಿಯು ನೀಡಿದ ಚೆಕ್ ಬೌನ್ಸ್ ಆಗಿದ್ದರ ಸಲುವಾಗಿ ನೆಗೋಶಿಯೇಬಲ್ ಇನಸ್ಟುಮೆಂಟ್ ಆ್ಯಕ್ಟ್ ಕಲಂ 138 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆಯ ನಂತರ ದಿನಾಂಕ : 05/03/2024 ರಂದು ಆರೋಪಿಗೆ ಚೆಕ್ ಮೊತ್ತ ರೂ.1,49,000/- ಗಳನ್ನು ಪಾವತಿಸುವಂತೆ ಹಾಗೂ ಒಂದು ವೇಳೆ ಪಾವತಿಸದಿದ್ದಲ್ಲಿ ಒಂದು ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಶಿಕ್ಷೆ ಅನುಭವಿಸುವಂತೆ ಆದೇಶ ಮಾಡಿದ್ದು, ಸದರಿ ಪ್ರಕರಣದ ಆದೇಶವನ್ನು ನ್ಯಾಯಾದೀಶರಾದ ಶ್ರೀಮತಿ ಜ್ಯೋತಿ ಪಾಟೀಲ ಅವರು ನೀಡಿದ್ದಾರೆ. ಪಿರ್ಯಾದುದಾರ ಸೊಸೈಟಿಯ ಕಾನೂನು ಸಲಹೆಗಾರ ಎಸ್. ವೈ. ಹೊಸಟ್ಟಿ ವಕೀಲರು ವಕಾಲತ್ತು ವಹಿಸಿದ್ದರು.