ಆರ್ಡಿ :
ಆರ್ಡಿ ಸಮೀಪದ ಕೊಂಜಾಡಿ ಶ್ರೀದುರ್ಗಾಪರಮೇಶ್ವರಿ, ಮಹಾಗಣಪತಿ ದೇವಳದ ವಾರ್ಷಿಕ ಕೆಂಡಸೇವೆ, ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೋಮವಾರ ಸಂಪನ್ನಗೊಂಡಿದೆ.
ಪುಣ್ಯಾಹ ವಾಚನ, ಪ್ರಧಾನ ಹೋಮ,ಕಲಶಾಭಿಷೇಕ,
ಬೇಳೂರು ಶ್ರೀದುರ್ಗಾಪರಮೇಶ್ವರಿ ಕನ್ಸ್ಟ್ರಕ್ಷನ್,
ಕೊಂಜಾಡಿ ಹಡಿಗಾರಮನೆ ಉಷಾಕಿರಣ ಪ್ರವೀಣಕುಮಾರ್ ಶೆಟ್ಟಿ ಮತ್ತು ಮಕ್ಕಳಿಂದ ಹೂವಿನ ಅಲಂಕಾರ ಸೇವೆ ಹಾಗೂ ಚಂಡಿಕಾ ಹೋಮ ಸೇವೆ, ಹಣ್ಣು ಕಾಯಿ, ಹರಿವಾಣ ನೈವೇದ್ಯ,ತುಲಾಭಾರ ಸೇವೆ,
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಕೊಂಜಾಡಿ
ಸಂಪಿಗೆಮನೆ ಜಲಜಾಕ್ಷಿ ಭೋಜ ಶೆಟ್ಟಿ ಮತ್ತು ಮನೆಯವರಿಂದ ಅನ್ನಸಂತರ್ಪಣೆ ಸೇವೆ, ರಾತ್ರಿ ಗಂಟುಬೀಳು ಶಾಲೆ,ಕೊಂಜಾಡಿ ಕಲ್ಮರ್ಗಿ ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಲಾಡಿ
ಮೇಳದವರಿಂದ ಹಂಸ ಪಲ್ಲಕ್ಕಿ ಯಕ್ಷಗಾನ ಬಯಲಾಟ,ರಾತ್ರಿ ದರ್ಶನ, ಕೆಂಡೋತ್ಸವ, ರಂಗಪೂಜೆ, ಢಕ್ಕೆ ಬಲಿ, ಸುತ್ತುಬಲಿ, ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿದೆ.