ಬೆಳ್ವೆ :
ಬೆಳ್ವೆ ಸಮೀಪದ ಮರೂರು ಶ್ರೀದುರ್ಗಾಪರಮೇಶ್ವರಿ
ದೇವಳದಲ್ಲಿ ಮರೂರು ಶ್ರೀದುರ್ಗಾಪರಮೇಶ್ವರಿ
ದೇವಸ್ಥಾನ ಟ್ರಸ್ಟ್ ಸಹಕಾರದಲ್ಲಿ ಮರೂರು ನೇತ್ರಾವತಿ
ಮತ್ತು ವೇ, ಮೂ.ಮಹಾಬಲೇಶ್ವರ ಬಾಯರಿಯವರ ಸೇವೆಯಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ
ಬ್ರಹ್ಮಕಲಶೋತ್ಸವ, ಮಹಾ ಅನ್ನ ಸಂತರ್ಪಣೆ ಮಂಗಳವಾರ ನಡೆಯಿತು. ಅರ್ಚಕ ವೃಂದವರು, ಆಡಳಿತ ಮಂಡಳಿಯವರು, ದೇವಳದ ಟ್ರಸ್ಟ್ ಪದಾಧಿಕಾರಿಗಳು,ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.