ರಾಂಚಿ:
ಆಪಾದಿತ ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರನ್ನು ಇಡಿ ಬುಧವಾರ ರಾತ್ರಿ ಬಂಧಿಸಿದೆ.
ಇಡಿ ಸಿಎಂ ಸೋರೆನ್ ಅವರನ್ನು 7 ಗಂಟೆಗೂ ಹೆಚ್ಚು ಕಾಲ ಪ್ರಶ್ನಿಸಿದ್ದು, ಬಂಧನವಾಗುತ್ತಿದ್ದಂತೆ ಜಾರ್ಖಂಡ್ ಮುಕ್ತಿ ಮೋರ್ಚಾ ಶಾಸಕರು ರಾಜಭವನಕ್ಕೆ ತೆರಳಿದ್ದು, ಸಚಿವರಾಗಿದ್ದ ಚಂಪೈ ಸೋರೆನ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.
ಹೇಮಂತ್ ಸೊರೇನ್ ರಾಜೀನಾಮೆ ಸಲ್ಲಿಸಿದ್ದು, 67 ರ ಹರೆಯದ ಚಂಪೈ ಸೋರೆನ್ ಸಿಎಂ ಆಗಿ ಪ್ರಮಾಣ ಸ್ವೀಕರಿಸುವ ಸಾಧ್ಯತೆ ಇದೆ.