ಬೆಳಗಾವಿ :ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಯಾವುದೇ ಪ್ರಸ್ತಾಪ ಸದ್ಯ ಸರಕಾರದ

ಮುಂದೆ ಇಲ್ಲ ಎಂದು ಬೈಲಹೊಂಗಲ
ಕಾಂಗ್ರೆಸ್ ಶಾಸಕ ಮಹಾಂತೇಶ
ಕೌಜಲಗಿ ಹೇಳಿದರು.

ಅವರು ಇಂದು ಸಂಜೆ 4 ಗಂಟೆಗೆ
ನನ್ನೊಂದಿಗೆ ದೂರವಾಣಿಯಲ್ಲಿ
ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ವಿಭಜನೆಯ ಸಂಬಂಧ ಎಲ್ಲರನ್ನೂ ವಿಶ್ವಾಸಕ್ಕೆ
ತೆಗೆದುಕೊಂಡೇ ನಿರ್ಧಾರ ಕೈಕೊಳ್ಳುವದಾಗಿ ಮುಖ್ಯಮಂತ್ರಿಗಳು ಈ ಹಿಂದೆಯೇ ಹೇಳಿದ್ದಾರೆಂದೂ ಕೌಜಲಗಿ ಅವರು ತಿಳಿಸುವ ಮೂಲಕ ವಿಭಜನೆಯ
ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ಫೆ.16 ರಂದು ಮಂಡಿಸಲಿರುವ
ಮುಂಗಡಪತ್ರದಲ್ಲಿ ಘೋಷಿಸುವ
ವಿಷಯವೇ ಇದಲ್ಲವೆಂದೂ ಕೌಜಲಗಿ ಅವರು ಹೇಳಿದ್ದಾರೆ.

ಶೀಘ್ರವೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಲಾಗುವದೆಂಬ ವರದಿಗಳು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ
ಹಿನ್ನೆಲೆಯಲ್ಲಿ ನಾನು ಕೌಜಲಗಿ ಅವರಿಗೆ ದೂರವಾಣಿ ಕರೆ ಮಾಡಿದ್ದೆ.

* ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ