ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಮಾಜಶಾಸ್ತ್ರ ಸಂಘದಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪ್ರಸಕ್ತ ವರ್ಷದ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಲಾಯಿತು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾಜಿ ಕಾಗಣೀಕರ ಮಾತನಾಡಿ, ಸಮಾಜವನ್ನು ಕಟ್ಟುವುದರಲ್ಲಿ ಸಮಾಜಶಾಸ್ತ್ರದ ಕೊಡುಗೆ ಅಪಾರವಾಗಿದೆ. ಪರಿಸರದಲ್ಲಿ ದಯೆಯು ಅತ್ಯವಶ್ಯಕವಾಗಿದೆ. ದೇಶ ಸ್ವರಾಜ್ಯವಾಗಬೇಕಾದರೆ ಎಲ್ಲರು ಶಿಕ್ಷಣವನ್ನು ಕಲಿಯಬೇಕು ಎಂದು ಹೇಳಿದರು.

ಪ್ರೊ. ಚಂದ್ರಿಕಾ ಕೆ.ಬಿ. ಮಾತನಾಡಿ, ಶಿವಾಜಿ ಕಾಗಣೀಕರ ಅವರು ಪ್ರಸ್ತುತ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುಮಂತ್ ಎಸ್. ಹಿರೇಮಠ ಅವರು ಶಿವಾಜಿ ಕಾಗಣೀಕರ ಅವರು ಪರಿಸರಕ್ಕೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ. ಸಮಾಜಶಾಸ್ತ್ರ ವಿದ್ಯಾರ್ಥಿಗಳು ಇಂಥವರ ವಿಷಯಗಳನ್ನು ಅರಿತು ಅವರ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ರವಿ ಎಸ್ ದಳವಾಯಿ ಮಾತನಾಡಿ, ಸಮಾಜಶಾಸ್ತ್ರದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯು ಇಂದಿನ ವಿದ್ಯಾರ್ಥಿಗಳಿಗೆ ಅತೀ ಅವಶ್ಯಕವಾಗಿದೆ. ಸಮಾಜಶಾಸ್ತ್ರ ಸಂಘದ ಮುಖ್ಯಸ್ಥೆ ಡಾ. ಮಂಜುಳಾ ಜಿ.ಕೆ. ಅವರು ಶಿವಾಜಿ ಕಾಗಣೀಕರ ಅವರು ಸರಳ ಮತ್ತು ಮಾದರಿ ಜೀವಿಯಾಗಿದ್ದಾರೆ. ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.

ಶ್ರವಣ ಸನದಿ ಮತ್ತು ಅಂಬಿಕಾ ಕುಂಬಾರ ಪ್ರಾರ್ಥಿಸಿದರು. ರಂಜಿತಾ ಪಾಟೀಲ ಮತ್ತು ಪೂಜಾ ಐಹೊಳೆ ನಿರೂಪಿಸಿದರು. ಶ್ರೀಶೈಲ್ ಉಳ್ಳಾಗಡ್ಡಿ ವಂದಿಸಿದರು.