ಬೆಳಗಾವಿ : ಅನಾರೋಗ್ಯದಿಂದ ಬೇಸತ್ತು ಕೆಕೆಆರ್‌ಟಿಸಿ ಚಾಲಕರೊಬ್ಬರು ಶುಕ್ರವಾರ ಮುಂಜಾನೆ ಬಳ್ಳಾರಿಯಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗಾವಿಯ ಸಂಕೇಶ್ವರ ಮೂಲದ ರಾಜು ದುಂಡಪ್ಪ ಪಾಟೀಲ (50) ಮೃತರು. ಬಳ್ಳಾರಿ ರೈಲ್ವೆ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

ಕೆಕೆಆರ್‌ಟಿಸಿಯ ಬಳ್ಳಾರಿ ವಿಭಾಗದ ಡಿಪೊ-2ದಲ್ಲಿ ಚಾಲಕರಾಗಿದ್ದ ಅವರು ದೇವಿನಗರದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಇದೇ ವಿಚಾರವಾಗಿ ಮನನೊಂದಿದ್ದರು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.