ಬೆಳಗಾವಿ : ಬೆಳಗಾವಿಯ ಕೆಎಲ್‌ಇ ವಿಶ್ವನಾಥ ಕತ್ತಿ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಮೇ 31, 2024 ರವರೆಗೆ ಉಚಿತ ದಂತ ತಪಾಸಣೆ ಶಿಬಿರವನ್ನು ಆಯೋಜಿಸುತ್ತಿದೆ. ಎಲ್ಲಾ ಮಕ್ಕಳು, ವಯಸ್ಕರು ಮತ್ತು ಹಿರಿಯ ನಾಗರಿಕರಿಗೆ ಉಚಿತ ದಂತ ತಪಾಸಣೆ ನಡೆಸಲಾಗುವುದು. ಶಾಲಾ ಮಕ್ಕಳಿಗೆ ಬೇಸಿಗೆ ರಜೆಯ ದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಭಾರಿ ಪ್ರಾಚಾರ್ಯೆ ಡಾ.ಅಂಜನಾ ಬಾಗೇವಾಡಿ ಕೋರಿದ್ದಾರೆ. ಹೆಚ್ಚಿನ ವಿವರಗಳಿಗಾಗಿ 0831-2444101 ಸಂಪರ್ಕಿಸಬಹುದು.