ಉಡುಪಿ, ಕುಂದಾಪುರ : ನವರಾತ್ರಿ ಮತ್ತು ವಿಜಯದಶಮಿಯ ಸಂಭ್ರಮಕ್ಕೆ ಬೆಂಗಳೂರಿನಿಂದ ಊರಿಗೆ ಬರುವ ಪ್ರಯಾಣಿಕರಿಗೆ ಟಿಕೇಟು ಸಿಗದ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ, ಕುಂದಾಪುರ ರೈಲು ಪ್ರಯಾಣಿಕರ ಸಮಿತಿಯ ಮನವಿಯಂತೆ ನೈರುತ್ಯ ರೈಲ್ವೆಗೆ ನವಮಿ ಹಾಗೂ ವಿಜಯ ದಶಮಿಗೆ ವಿಶೇಷ ರೈಲು ಓಡಿಸುವಂತೆ ಸೂಚಿಸಲಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈಗಾಗಲೇ ಬಸ್ ಹಾಗೂ ರೈಲುಗಳ ಟಿಕೆಟ್ ಖಾಲಿಯಾಗಿದ್ದು,ಕಡೇ ಕ್ಷಣದಲ್ಲಿ ಪ್ರಯಾಣ ಮಾಡಬೇಕಿರುವ ಸಾವಿರಾರು ಜನ ಉಡುಪಿ, ಕುಂದಾಪುರ, ಕಾರವಾರ ಭಾಗದ ಜನರಿಗೆ ಈ ವಿಶೇಷ ರೈಲು ಅನುಕೂಲವಾಗಲಿದೆ ಎಂದು ತಿಳಿಸಿದ್ದು, ಈ ಬಗ್ಗೆ ಶೀಘ್ರ ಪ್ರಕಟಣೆಗೆ ಇಲಾಖೆಗೆ ಮನವಿ ಮಾಡಿದ್ದೇನೆ
ಎಂದು ಅವರು ತಿಳಿಸಿದ್ದಾರೆ.