ಬೆಳಗಾವಿ : ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯ ಹಾಗೂ ಲಿಂಗರಾಜ ಮಹಾವಿದ್ಯಾಲಯದ ಸಹಯೋಗದಲ್ಲಿ ಭಾರತ ಗ್ರಂಥಾಲಯದ ಪಿತಾಮಹ ಡಾ. ಎಸ್ ಆರ್ ರಂಗನಾಥನ್ ಅವರ 132 ನೆಯ ಜನ್ಮದಿನದ ನಿಮಿತ್ತ ಭಾವಚಿತ್ರಕ್ಕೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಆರ್ ಎಲ್ಎಸ್ ಕಾಲೇಜಿನ ಪ್ರಾಂಶುಪಾಲೆ ಡಾ.ಜೆ.ಎಸ್. ಕವಳೇಕರ, ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್ .ಎಸ್. ಮೇಲಿನಮನಿ ,ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಸಿ.ಕಾಮಗೋಳ , ಗಿರಿಜಾ ಹಿರೇಮಠ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿನಯಕುಮಾರ .ಎಂ , ಪ್ರೊ ವಿ ಕೆ ಗಾಣಿಗೇರ, ಆರ್ ಎಲ್ ಎಸ್ ಮಹಾವಿದ್ಯಾಲಯದ ಮುಖ್ಯ ಗ್ರಂಥಪಾಲಕ ವಿನಾಯಕ ಸವಟಗಿ ,ಪ್ರಿಯಾಂಕ ಕುರುಬಚನ್ನಾಳ, ಎಸ್ ಎಂ ತಿಗಡಿ, ದೀಪಾ ಪಾಟೀಲ, ಕವಿತಾ ಚಿಟಗಿ ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.