ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಅಹವಾಲು ಸಲ್ಲಿಸಲು ಮಂಗಳವಾರ ವಿವಿಧ ಭಾಗಗಳಿಂದ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು ಬೆಳಗ್ಗೆ ಯಿಂದ ಸಂಜೆ 4 ಗಂಟೆಯವರೆಗೂ ಊಟ, ತಿಂಡಿ ಬಿಟ್ಟು ಸಚಿವರು ಅಹವಾಲು ಸ್ವೀಕರಿಸಿದರು.

ಸಚಿವರು ಬೆಳಗಾವಿಯಲ್ಲಿದ್ದಾಗಲೆಲ್ಲ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು ಸಚಿವರು ಮನೆಯ ಬಳಿ ಗೃಹ ಕಚೇರಿಗೆ ನೂರಾರು ಜನರು ಆಗಮಿಸುತ್ತಾರೆ. ತಾಳ್ಮೆಯಿಂದ ಎಲ್ಲರ ಅಹವಾಲು ಆಲಿಸಿ, ಸಮಾಧಾನಪಡಿಸಿ ಕಳಿಸುತ್ತಾರೆ. ಮಂಗಳವಾರವೂ ದೊಡ್ಡ ಸಂಖ್ಯೆಯಲ್ಲೇ ಜನರು ಆಗಮಿಸಿದ್ದರು.
ಕಳದ 4 ದಿನಗಳಿಂದ ಲಕ್ಷ್ಮೀ ಹೆಬ್ಬಾಳಕರ್ ಅವರು ಮೈಸೂರು, ಭದ್ರಾವತಿ, ಗದಗ ಪ್ರವಾಸದಲ್ಲಿದ್ದಾರೆ. ಸೋಮವಾರ ಗದಗ ಜಿಲ್ಲಾ ಪ್ರವಾಸ ಮಾಡಿ ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ಬೆಳಗಾವಿ ತಲುಪಿದ್ದಾರೆ. ಮಂಗಳವಾರ ಸಂಜೆ ಬೆಂಗಳೂರಿಗೆ ತೆರಳಿ, ಬುಧವಾರ ಉಡುಪಿಗೆ ಹೋಗುವ ಕಾರ್ಯಕ್ರಮವಿದೆ. ಆದರೂ ಮಂಗಳವಾರ ಬಹು ಹೊತ್ತಿನವರೆಗೂ ಜನರ ಸಮಸ್ಯೆಗಳಿಗೆ ಕಿವಿಯಾದರು. ಬಂದ ಜನರು ಸಚಿವರ ಸ್ಪಂದನೆಗೆ ಧನ್ಯವಾದ ಸಲ್ಲಿಸಿ ಮರಳುತ್ತಿದ್ದರು.