ಬೆಳಗಾವಿ :
ಗೋವಾದಿಂದ ಬೆಳಗಾವಿಗೆ ಸಾಗಿಸುತ್ತಿದ್ದ ಅಕ್ರಮ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು 25 ಲಕ್ಷ ಅಕ್ರಮ ಮದ್ಯವನ್ನು ಬೆಳಗಾವಿಯ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಈ ಸಂಬಂಧ ಬಿಹಾರದ ಸುಬೋದ ಮಹತೋ ಎಂಬವನನ್ನು ಬಂಧಿಸಿದ್ದಾರೆ.

 

ಗೋವಾದಿಂದ ಬೆಳಗಾವಿಗೆ ತರುತ್ತಿದ್ದ ಲಾರಿಯ ಮೇಲೆ ಅಬಕಾರಿ ಪೊಲೀಸರು ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ದಾಳಿ ನಡೆಸಿದಾಗ ಅದರಲ್ಲಿ 90 ಬಾಕ್ಸ್ ನಲ್ಲಿದ್ದ ಒಟ್ಟು 25 ಲಕ್ಷ ರೂ. ಬೆಲೆಯ ಮದ್ಯ ಇರುವುದನ್ನು ಪತ್ತೆ ಹಚ್ಚಿ 15 ಲಕ್ಷ ಮೌಲ್ಯದ ವಾಹನವನ್ನು ಸಹಾ ವಶಕ್ಕೆ ಪಡೆದುಕೊಂಡಿದ್ದಾರೆ.

ಅಪರ ಅಬಕಾರಿ ಆಯುಕ್ತ ಡಾ.ವೈ. ಮಂಜುನಾಥ, ಉಪ ಆಯುಕ್ತೆ ವನಜಾಕ್ಷಿ ಎಂ. ಅವರ ಮಾರ್ಗದರ್ಶನದಲ್ಲಿ ಅಬಕಾರಿ ಅಧೀಕ್ಷಕ ವಿಜಯಕುಮಾರ ಹಿರೇಮಠ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.